ಕೊಪ್ಪಳ: ಕೊಪ್ಪಳ ಜಿಲ್ಲೆಯ ಈಗಾಗಲೇ ಜಿಂದಾಲ್ ನಂಜು ಆರಂಭವಾಗಿದ್ದರಿಂದ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸಂಖ್ಯೆ ಹೆಚ್ಚಾಗುತ್ತಾ ಸಾಗಿದೆ. ಇದರಿಂದ ಭಾನುವಾರವೂ ಕೂಡ ಮತ್ತೊಂದು ಸೋಂಕು ದೃಡವಾಗಿದ್ದು ಜಿಲ್ಲೆಯಲ್ಲಿ ಸೋಖಿತರ ಸಂಖ್ಯೆ 29 ಕ್ಕೆ ಏರಿಕೆಯಾಗಿದೆ.
ಬಳ್ಳಾರಿಯ ಜಿಂದಾಲಿನಲ್ಲಿ ಕೆಲಸ ಮಾಡುತ್ತಿದ್ದ ಗಂಗಾವತಿ ತಾಲೂಕಿನ ಮರಳಿ ಗ್ರಾಮದ 32 ವರ್ಷದ ಯುವಕನಿಗೆ ಸೋಂಕು ಇರುವುದು ದೃಢಪಟ್ಟಿದೆ. ಜೂನ್ 8ರಂದು ಜಿಂದಾಲ್ ಕಂಪನಿಗೆ ಹೋಗಿ ಬಂದ ಬಳಿಕ ಜೂನ್ 14ರವರೆಗೆ ಹೋಮ್ ಕ್ವರಂಟೈನ್ ಮಾಡುವಂತೆ ಸೂಚಿಸಿ ಗಂಟಲ ದ್ರವನ್ನು ಲ್ಯಾಬ್ಗೆ ಕಳಿಸಲಾಗಿತ್ತು. ಆದರೆ ಫರೀಕ್ಷೆಯ ಫಲಿತಾಂಶ ಭಾನುವಾರ ಬಂದಿದ್ದು, ಸೋಂಕು ಇರುವುದು ದೃಡವಾಗಿದೆ.
ಮನೆಯಲ್ಲಿನ ನಾಲ್ವರು ಹಾಗೂ ಕ್ವಾರಂಟೈನ್ ಕೇಂದ್ರದ ನಾಲ್ವರನ್ನು ಪ್ರಾಥಮಿಕ ಸಂಪರ್ಕಿತರು ಹಾಗೂ ಕ್ವಾರಂಟೈನ್ ಕೇಂದ್ರದ ಬೇರೆ ನಾಲ್ವರನ್ನು ದ್ವೀತಿಯ ಸಂಪರ್ಕಿತರು ಎಂದು ಪತ್ತೆ ಗಚ್ಚಲಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ 29 ಕೇಸುಗಳ ಪೈಕಿ 12 ಜನ ಗುಣಮುಖರಾಗಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದಾಳೆ. ಭಾನುವಾರ ಸೋಂಕಿತ ಪ್ರಕರಣ ಸೇರಿದಂತೆ ಒಟ್ಟು 16 ಜನರಿಗೆ ಚಿಕಿತ್ಸೆ ಮುಂದುವರೆದಿದೆ.