ಕೊಪ್ಪಳ: ಮಹಾ ಮಾರಿಯಂತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನಾ ನಿಯಂತ್ರಿಸಲು ಬೆಂಗಳೂರು ಲಾಕ್ ಡೌನ್ ಮಾಡಲು ನಿರ್ಣಯಿಸಿರುವ ಸರಕಾರ ಸದ್ಯದ ಮಟ್ಟಿಗೆ ಕೊಪ್ಪಳ ಜಿಲ್ಲೆಯಲ್ಲಿ ಲಾಕ್ ಡೌನ್ ಇಲ್ಲ ಎಂದು ಜಿಲ್ಲಾಧಿಕಾರಿ ಎಸ್. ವಿಕಾಸ್ ಕಿಶೋರ್ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತು ಸೋಮವಾರ ಸಂಜೆ ಮುಖ್ಯಮಂತ್ರಿ ವೀಡಿಯೋ ಕಾನ್ಪುರೆನ್ಸ್ ಮೂಲಕ ನಡೆಸಿದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾಹಿತಿ ನೀಡಿದ್ದು ಜಿಲ್ಲೆಯ ಕೊರೋನಾ ಕೆಸುಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಜಿಲ್ಲೆಯ ಕೊರೋನಾ ಕುರಿತು ಸಂಪೂರ್ಣ ಮಾಹಿತಿ ನೀಡಲಾಗಿದೆ. ಆದರೆ ಸದ್ಯ ಬೆಂಗಳೂರು ಹಾಗೂ ಉಳಿದ ೧೨ ಜಿಲ್ಲೆಗಳ ಲಾಕ್ ಡೌನ್ ಕುರಿತು ನಿರ್ಣಯಿಸರಬಹುದಾಗಿದೆ. ಆದರೆ ಕೊಪ್ಪಳ ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡುವ ಕುರಿತು ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ಲಾಕ್ ಡೌನ್ ಕುರಿತು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಕುರಿತು ಚರ್ಚೆ ಮಾಡಿ ಇನ್ನು ಎರಡು ದಿನಗಳಲ್ಲಿ ನಿರ್ಣಯ ತೆಗೆದುಕೊಳ್ಳಬಹುದು ಎಂದು ತಿಳಿಸಿದರು.