ಕೊಪ್ಪಳ: ಆರಂಭದಲ್ಲಿ ಹಸಿರು ವಲಯವನ್ನು ಕಾಯ್ದುಕೊಂಡು ಬಂದ ಕೊಪ್ಪಳ ಜಿಲ್ಲೆಯಲ್ಲಿ ಈಗ ಅಟ್ಟಹಾಸ ಮುಂದುವರೆಸಿ ಸಾವಿರ ಗಡಿ ದಾಟಿದೆ. ಆದರೆ ಬುಧವಾರ ೭೯ ಜನರಿಗೆ ಸೋಂಕು ತಗುಲಿ ಸೋಂಕಿತರ ಸಂಖ್ಯೆ ೧೦೪೬ಕ್ಕೆ ಏರಿಕೆಯಾಗಿದೆ.
ಕೊಪ್ಪಳ ತಾಲೂಕಿನಲ್ಲಿ 10 ಜನರಿಗೆ, ಗಂಗಾವತಿ ತಾಲೂಕಿನಲ್ಲಿ 47 ಜನರಿಗೆ, ಕುಷ್ಟಗಿ ತಾಲೂಕಿನಲ್ಲಿ 13 ಜನರಿಗೆ, ಹಾಗೂ ಯಲಬುರ್ಗಾ ತಾಲೂಕಿನಲ್ಲಿ 09 ಜನರು ಸೇರಿ ಸೋಂಕಿತರ ಸಂಖ್ಯೆ 1046ಕ್ಕೆ ಏರಿಕೆಯಾಗಿದೆ.
ಅದರಲ್ಲಿ 644 ಜನರು ಗುಣಮುಖರಾಗಿದ್ದಾರೆ. ಅದರಲ್ಲಿ ಒಟ್ಟು 22 ಜನರು ಸಾವಿಗೀಡಾಗಿದ್ದಾರೆ.