Sunday, August 14, 2022

Latest Posts

ಕೊಪ್ಪಳ ಜಿಲ್ಲೆಯಲ್ಲಿ 113 ಜನರಿಗೆ ಕೊರೋನಾ ಪಾಸಿಟಿವ್, 48 ಜನ ಗುಣಮುಖ, ಇಬ್ಬರ ಸಾವು

ಕೊಪ್ಪಳ:  ಜಿಲ್ಲೆಯಲ್ಲಿ ಬುಧವಾರ 113 ಜನರಿಗೆ ಕೊರೋನಾ ಸೋಂಕು ದೃಡ ಪಟ್ಟಿದೆ. 48 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬೀಡುಗಡೆಯಾಗಿದ್ದು ಸೋಂಕಿಗೆ ಇಬ್ಬರು ಸಾವಿಗಿಡಾಗಿದ್ದಾರೆ.
ಕೊಪ್ಪಳ  ತಾಲೂಕಿನಲ್ಲಿ 27 ಜನರಿಗೆ, ಗಂಗಾವತಿ ತಾಲೂಕಿನಲ್ಲಿ 46 ಜನರಿಗೆ, ಕುಷ್ಟಗಿ ತಾಲೂಕಿನಲ್ಲಿ 18 ಜನರಿಗೆ  ಯಲಬುರ್ಗಾ ತಾಲೂಕಿನಲ್ಲಿ 22 ಜನರಿಗೆ  ಸೇರಿದಂತೆ  ಸೋಂಕಿತರ ಸಂಖ್ಯೆ 1,870 ಕ್ಕೆ  ಏರಿಕೆಯಾಗಿದೆ.
ಆದರೆ  ಜಿಲ್ಲೆಯಲ್ಲಿ ಬುಧವಾರ 48 ಜನ ಸೇರಿದಂತೆ ಇಲ್ಲಿವರೆಗೂ 990 ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬೀಡುಗಡೆಯಾಗಿದ್ದಾರೆ.
ಉಳಿದ  ಆಸ್ಪತ್ರೆಯಲ್ಲಿ  ಚಿಕಿತ್ಸೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್. ವಿಕಾಸ್  ಕಿಶೋರ್ ಅವರು  ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss