ಕೊಪ್ಪಳ : ಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಸೋಂಕಿನ ಅಬ್ಬರ ಮುಂದುವರೆದಿದ್ದು , ಶನಿವಾರ 129 ಜನರಿಗೆ ವಕ್ಕರಿಸಿದ್ದು , ಸೋಂಕಿತರ ಸಂಖ್ಯೆ 11,486ಕ್ಕೆ ತಲುಪಿದೆ .
ಗಂಗಾವತಿಯಲ್ಲಿ -45, ಕೊಪ್ಪಳ -35 , ಯಲಬುರ್ಗಾ -20, ಹಾಗೂ ಕುಷ್ಟಗಿಯಲ್ಲಿ 20 ಪ್ರಕರಣ ದೃಢಪಟ್ಟಿದೆ .
ಇಂದು 142 ಸೇರಿ 9,045 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ . ಇಂದು ಒಂದು ಸಾವಿನ ಸಂಖ್ಯೆ ಸಂಭವಿಸದೇ ಇರುವುದು ನೆಮ್ಮದಿಯ ವಿಚಾರವಾಗಿದೆ.1926ಜನ ಐಸೋಲೇಷನಲ್ಲಿದ್ದಾರೆ ಎಂದು ಡಿಸಿ ಎಸ್.ವಿಕಾಸ್ ಕಿಶೋರ್ ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ