Wednesday, August 10, 2022

Latest Posts

ಕೊಪ್ಪಳ ಜಿಲ್ಲೆಯಲ್ಲಿ 154 ಜನರಿಗೆ ಸೋಂಕು ದೃಢ 114 ಜನ ಗುಣಮುಖ

 ಕೊಪ್ಪಳ: ಜಿಲ್ಲೆಯಲ್ಲಿ ಮಂಗಳವಾರ ೧೫೪ ಜನರಿಗೆ ಸೋಂಕು ದೃಡಪಟ್ಟಿದ್ದು, ೧೧೪ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬೀಡುಗಡೆಯಾಗಿದ್ದಾರೆ.   ಏಳು ಜನ ಸಾವಿಗೀಡಾಗಿದ್ದಾರೆ.
ಕೊಪ್ಪಳ  ತಾಲೂಕಿನಲ್ಲಿ ೫೨ ಜನರಿಗೆ, ಗಂಗಾವತಿ ತಾಲೂಕಿನಲ್ಲಿ ೫೮ ಜನರಿಗೆ, ಕುಷ್ಟಗಿ ತಾಲೂಕಿನಲ್ಲಿ ೨೩ ಜನರಿಗೆ  ಯಲಬುರ್ಗಾ ತಾಲೂಕಿನಲ್ಲಿ ೨೧ ಜನರು ಸೇರಿ ಜಿಲ್ಲೆಯಲ್ಲಿ  ಸೋಂಕಿತರ ಸಂಖ್ಯೆ ೫,೪೦೧ಕ್ಕೆ  ಏರಿಕೆಯಾಗಿದೆ.
ಆದರೆ  ಜಿಲ್ಲೆಯಲ್ಲಿ ಏಳು ಜನ ಸಾವಿಗಿಡಾಗಿದ್ದು, ಒಟ್ಟು ಸಾವಿನ ಸಂಖ್ಯೆ ೧೨೬ ಕ್ಕೆ ಏರಿಕೆಯಾಗಿದೆ. ಮಂಗಳವಾರ ೧೧೪ ಜನ ಸೇರಿದಂತೆ ಇಲ್ಲಿವರೆಗೂ ೩,೮೪೪ ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬೀಡುಗಡೆಯಾಗಿದ್ದಾರೆ. ಅದರಲ್ಲಿ ೧೨೧ ಜನ ಸೇರಿದಂತೆ ಒಟ್ಟು ೧,೨೧೮ ಜನರನ್ನು ಹೋಂ ಐಸೋಲೇಷನ್ ಮಾಡಲಾಗಿದೆ. ಉಳಿದ  ಜನರಿಗೆ ಆಸ್ಪತ್ರೆಯಲ್ಲಿ  ಚಿಕಿತ್ಸೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್. ವಿಕಾಸ್  ಕಿಶೋರ್ ಅವರು  ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss