Tuesday, August 16, 2022

Latest Posts

ಕೊಪ್ಪಳ ಜಿಲ್ಲೆಯಲ್ಲಿ 167 ಜನರಿಗೆ ಸೋಂಕು ದೃಢ, 212 ಜನ ಗುಣಮುಖ, ಇಬ್ಬರ ಸಾವು

ಕೊಪ್ಪಳ: ಜಿಲ್ಲೆಯಲ್ಲಿ ಗುರುವಾರ ೧೬೭ ಜನರಿಗೆ ಸೋಂಕು ದೃಡಪಟ್ಟಿದ್ದು, ೨೧೨ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬೀಡುಗಡೆಯಾಗಿದ್ದಾರೆ. ಇಬ್ಬರು ಸಾವಿಗೀಡಾಗಿದ್ದಾರೆ.
ಕೊಪ್ಪಳ  ತಾಲೂಕಿನಲ್ಲಿ ೪೬ ಜನರಿಗೆ, ಗಂಗಾವತಿ ತಾಲೂಕಿನಲ್ಲಿ ೭೯ ಜನರಿಗೆ, ಕುಷ್ಟಗಿ ತಾಲೂಕಿನಲ್ಲಿ ೩೦ ಜನರಿಗೆ  ಯಲಬುರ್ಗಾ ತಾಲೂಕಿನಲ್ಲಿ ೧೩ ಜನರುಗೆ ಸೇರಿ ಜಿಲ್ಲೆಯಲ್ಲಿ  ಸೋಂಕಿತರ ಸಂಖ್ಯೆ ೩,೧೨೬ ಕ್ಕೆ  ಏರಿಕೆಯಾಗಿದೆ.
ಆದರೆ  ಜಿಲ್ಲೆಯಲ್ಲಿ ಇಬ್ಬರು ಸಾವಿಗಿಡಾಗಿದ್ದು, ಗುರುವಾರ ೨೧೨ ಜನ ಸೇರಿದಂತೆ ಇಲ್ಲಿವರೆಗೂ ೧,೯೦೭ ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬೀಡುಗಡೆಯಾಗಿದ್ದಾರೆ.
ಉಳಿದ  ಆಸ್ಪತ್ರೆಯಲ್ಲಿ  ಚಿಕಿತ್ಸೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್. ವಿಕಾಸ್  ಕಿಶೋರ್ ಅವರು  ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss