ಕೊಪ್ಪಳ: ಜಿಲ್ಲೆಯಲ್ಲಿ ಭಾನುವಾರ 170 ಜನರಿಗೆ ಸೋಂಕು ದೃಢಪಟ್ಟಿದ್ದು, 154 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬೀಡುಗಡೆಯಾಗಿದ್ದಾರೆ. ಕೊವಿಡ್-19ಗೆ ನಾಲ್ವರು ಸಾವಿಗೀಡಾಗಿದ್ದಾರೆ.
ಕೊಪ್ಪಳ ತಾಲೂಕಿನಲ್ಲಿ 51 ಜನರಿಗೆ, ಗಂಗಾವತಿ ತಾಲೂಕಿನಲ್ಲಿ 112 ಜನರಿಗೆ, ಕುಷ್ಟಗಿ ತಾಲೂಕಿನಲ್ಲಿ 03 ಜನರಿಗೆ ಯಲಬುರ್ಗಾ ತಾಲೂಕಿನಲ್ಲಿ 04 ಜನರುಗೆ ಸೇರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,680 ಕ್ಕೆ ಏರಿಕೆಯಾಗಿದೆ.
ಆದರೆ ಜಿಲ್ಲೆಯಲ್ಲಿ ನಾಲ್ವರು ಸಾವಿಗಿಡಾಗಿದ್ದು, ಭಾನುವಾರ 154 ಜನ ಸೇರಿದಂತೆ ಇಲ್ಲಿವರೆಗೂ 2,405 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬೀಡುಗಡೆಯಾಗಿದ್ದಾರೆ. ಅದರಲ್ಲಿ ಭಾನುವಾರ 197 ಜನ ಸೇರಿದಂತೆ ಒಟ್ಟು 793 ಜನರನ್ನು ಹೋಂ ಐಸೋಲೇಷನ್ ಮಾಡಲಾಗಿದೆ. ಉಳಿದ ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್. ವಿಕಾಸ್ ಕಿಶೋರ್ ಅವರು ತಿಳಿಸಿದ್ದಾರೆ.