ಕೊಪ್ಪಳ: ಜಿಲ್ಲೆಯಲ್ಲಿ ಶುಕ್ರವಾರ ೧೭೨ ಜನರಿಗೆ ಸೋಂಕು ದೃಡಪಟ್ಟಿದ್ದು, ೧೪೦ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬೀಡುಗಡೆಯಾಗಿದ್ದಾರೆ. ಕೊವಿಡ್-೧೯ಗೆ ಮೂವರು ಸಾವಿಗೀಡಾಗಿದ್ದಾರೆ.
ಕೊಪ್ಪಳ ತಾಲೂಕಿನಲ್ಲಿ ೫೯ ಜನರಿಗೆ, ಗಂಗಾವತಿ ತಾಲೂಕಿನಲ್ಲಿ ೭೫ ಜನರಿಗೆ, ಕುಷ್ಟಗಿ ತಾಲೂಕಿನಲ್ಲಿ ೨೮ ಜನರಿಗೆ ಯಲಬುರ್ಗಾ ತಾಲೂಕಿನಲ್ಲಿ ೧೦ ಜನರುಗೆ ಸೇರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೩,೨೯೮ ಕ್ಕೆ ಏರಿಕೆಯಾಗಿದೆ.
ಆದರೆ ಜಿಲ್ಲೆಯಲ್ಲಿ ಮೂವರು ಸಾವಿಗಿಡಾಗಿದ್ದು, ಶುಕ್ರವಾರ ೧೪೦ ಜನ ಸೇರಿದಂತೆ ಇಲ್ಲಿವರೆಗೂ ೨,೦೪೭ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬೀಡುಗಡೆಯಾಗಿದ್ದಾರೆ. ಅದರಲ್ಲಿ ಶುಕ್ರವಾರ ೮೫ ಜನ ಸೇರಿದಂತೆ ಒಟ್ಟು ೭೪೯ ಜನರನ್ನು ಹೋಂ ಐಸೋಲೇಷನ್ ಮಾಡಲಾಗಿದೆ. ಉಳಿದ ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್. ವಿಕಾಸ್ ಕಿಶೋರ್ ಅವರು ತಿಳಿಸಿದ್ದಾರೆ.