Friday, July 1, 2022

Latest Posts

ಕೊಪ್ಪಳ ಜಿಲ್ಲೆಯಲ್ಲಿ 173 ಜನರಿಗೆ ಸೋಂಕು ದೃಢ, 207 ಜನ ಗುಣಮುಖ

ಕೊಪ್ಪಳ: ಜಿಲ್ಲೆಯಲ್ಲಿ ಗುರುವಾರ ೧೭೩ಜನರಿಗೆ ಸೋಂಕು ದೃಢಪಟ್ಟಿದ್ದು, ೨೦೭ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬೀಡುಗಡೆಯಾಗಿದ್ದಾರೆ. ಕೊವಿಡ್-೧೯ಗೆ ಏಳು ಜನ ಸಾವಿಗೀಡಾಗಿದ್ದಾರೆ.
ಕೊಪ್ಪಳ  ತಾಲೂಕಿನಲ್ಲಿ ೬೪ ಜನರಿಗೆ, ಗಂಗಾವತಿ ತಾಲೂಕಿನಲ್ಲಿ ೭೪ ಜನರಿಗೆ, ಕುಷ್ಟಗಿ ತಾಲೂಕಿನಲ್ಲಿ ೨೩ ಜನರಿಗೆ  ಯಲಬುರ್ಗಾ ತಾಲೂಕಿನಲ್ಲಿ ೧೨ ಜನರು ಸೇರಿ ಜಿಲ್ಲೆಯಲ್ಲಿ  ಸೋಂಕಿತರ ಸಂಖ್ಯೆ ೪,೨೫೯ಕ್ಕೆ  ಏರಿಕೆಯಾಗಿದೆ.
ಆದರೆ  ಜಿಲ್ಲೆಯಲ್ಲಿ ಏಳು ಜನ ಸಾವಿಗಿಡಾಗಿದ್ದು, ಗುರುವಾರ ೨೦೭ ಜನ ಸೇರಿದಂತೆ ಇಲ್ಲಿವರೆಗೂ ೩,೦೪೬ ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬೀಡುಗಡೆಯಾಗಿದ್ದಾರೆ. ಅದರಲ್ಲಿ ೯೨ ಜನ ಸೇರಿದಂತೆ ಒಟ್ಟು ೭೮೫ ಜನರನ್ನು ಹೋಂ ಐಸೋಲೇಷನ್ ಮಾಡಲಾಗಿದೆ. ಉಳಿದ  ಜನರಿಗೆ ಆಸ್ಪತ್ರೆಯಲ್ಲಿ  ಚಿಕಿತ್ಸೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್. ವಿಕಾಸ್  ಕಿಶೋರ್ ಅವರು  ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss