Wednesday, August 10, 2022

Latest Posts

ಕೊಪ್ಪಳ ಜಿಲ್ಲೆಯಲ್ಲಿ 197 ಜನರಿಗೆ ಸೋಂಕು ದೃಢ , 123 ಜನ ಗುಣಮುಖ

ಕೊಪ್ಪಳ: ಜಿಲ್ಲೆಯಲ್ಲಿ ಸೋಮವಾರ 197 ಜನರಿಗೆ ಸೋಂಕು ದೃಢಪಟ್ಟಿದ್ದು, 123 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬೀಡುಗಡೆಯಾಗಿದ್ದಾರೆ. ಕೊವಿಡ್-19ಗೆ ಹತ್ತು ಜನ ಸಾವಿಗೀಡಾಗಿದ್ದಾರೆ.
ಕೊಪ್ಪಳ ತಾಲೂಕಿನಲ್ಲಿ 40 ಜನರಿಗೆ, ಗಂಗಾವತಿ ತಾಲೂಕಿನಲ್ಲಿ 117 ಜನರಿಗೆ, ಕುಷ್ಟಗಿ ತಾಲೂಕಿನಲ್ಲಿ 23 ಜನರಿಗೆ ಯಲಬುರ್ಗಾ ತಾಲೂಕಿನಲ್ಲಿ 17 ಜನರು ಸೇರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 6,650 ಕ್ಕೆ ಏರಿಕೆಯಾಗಿದೆ.
ಆದರೆ ಜಿಲ್ಲೆಯಲ್ಲಿ ಸೋಮವಾರ ಹತ್ತು ಜನರು ಸಾವಿಗಿಡಾಗಿದ್ದು, ಮತ್ತುಷ್ಟು ಆತಂಕ ಮೂಡಿಸಿದೆ. ಅದರಂತೆ 123 ಜನ ಸೇರಿದಂತೆ ಇಲ್ಲಿವರೆಗೂ 4,810 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬೀಡುಗಡೆಯಾಗಿದ್ದಾರೆ. ಅದರಲ್ಲಿ 106 ಜನ ಸೇರಿದಂತೆ ಒಟ್ಟು 1,434 ಜನರನ್ನು ಹೋಂ ಐಸೋಲೇಷನ್ ಮಾಡಲಾಗಿದೆ. ಉಳಿದ ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್. ವಿಕಾಸ್ ಕಿಶೋರ್ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss