Tuesday, August 9, 2022

Latest Posts

ಕೊಪ್ಪಳ ಜಿಲ್ಲೆಯಲ್ಲಿ 220 ಜನರಿಗೆ ಸೋಂಕು ದೃಢ, 229 ಜನ ಗುಣಮುಖ

ಕೊಪ್ಪಳ: ಜಿಲ್ಲೆಯಲ್ಲಿ ಗುರುವಾರ ೨೨೦ ಜನರಿಗೆ ಸೋಂಕು ದೃಢಪಟ್ಟಿದ್ದು, ೨೨೯ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬೀಡುಗಡೆಯಾಗಿದ್ದಾರೆ. ಕೊವಿಡ್-೧೯ಗೆ ಮೂರು ಜನ ಸಾವಿಗೀಡಾಗಿದ್ದಾರೆ.
ಕೊಪ್ಪಳ  ತಾಲೂಕಿನಲ್ಲಿ ೪೧ ಜನರಿಗೆ, ಗಂಗಾವತಿ ತಾಲೂಕಿನಲ್ಲಿ ೧೨೧ ಜನರಿಗೆ, ಕುಷ್ಟಗಿ ತಾಲೂಕಿನಲ್ಲಿ ೩೪ ಜನರಿಗೆ  ಯಲಬುರ್ಗಾ ತಾಲೂಕಿನಲ್ಲಿ ೨೪ ಜನರು ಸೇರಿ ಜಿಲ್ಲೆಯಲ್ಲಿ  ಸೋಂಕಿತರ ಸಂಖ್ಯೆ ೫,೭೭೭ಕ್ಕೆ  ಏರಿಕೆಯಾಗಿದೆ.
ಆದರೆ  ಜಿಲ್ಲೆಯಲ್ಲಿ ಮೂರು ಜನ ಸಾವಿಗಿಡಾಗಿದ್ದು, ಗುರುವಾರ ೨೨೯ ಜನ ಸೇರಿದಂತೆ ಇಲ್ಲಿವರೆಗೂ ೪,೨೦೦ ಜನ ಗುಣಮುಖರಾಗಿ ಆಸ್ಪತ್ರೆಯಿಂದ  ಬೀಡುಗಡೆಯಾಗಿದ್ದಾರೆ. ಅದರಲ್ಲಿ ೧೩೧ ಜನ ಸೇರಿದಂತೆ ಒಟ್ಟು ೧,೧೯೪ ಜನರನ್ನು ಹೋಂ ಐಸೋಲೇಷನ್ ಮಾಡಲಾಗಿದೆ. ಉಳಿದ  ಜನರಿಗೆ ಆಸ್ಪತ್ರೆಯಲ್ಲಿ  ಚಿಕಿತ್ಸೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್. ವಿಕಾಸ್  ಕಿಶೋರ್ ಅವರು  ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss