ಕೊಪ್ಪಳ: ಜಿಲ್ಲೆಯಲ್ಲಿ ಮಂಗಳವಾರ ಕೊವಿಡ್ -೧೯ ಗೆ ಓರ್ವ ವ್ಯಕ್ತಿ ಮೃತಪಟ್ಟರೆ, 88 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 967 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ಕಾರಟಗಿಯ ೬೨ ವರ್ಷದ ನಿವಾಸಿ ಕೊರೋನಾ ಸೋಂಕು ದೃಢವಾಗಿ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರ ಉಸಿರಾಟದ ತೊಂದರೆ ಯಿಂದ ಮಂಗಳವಾರ ಸಾವಿಗೀಡಾಗಿದ್ದಾನೆ.
ಕೊಪ್ಪಳ ತಾಲೂಕಿನಲ್ಲಿ 25 ಜನರಿಗೆ, ಗಂಗಾವತಿ ತಾಲೂಕಿನಲ್ಲಿ 59 ಜನರಿಗೆ, ಕುಷ್ಟಗಿ ತಾಲೂಕಿನಲ್ಲಿ 03 ಜನರಿಗೆ, ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಒಬ್ಬರು ಸೇರಿ ಸೋಂಕಿತರ ಸಂಖ್ಯೆ 967ಕ್ಕೆ ಏರಿಕೆಯಾಗಿದೆ. ಅದರಲ್ಲಿ 594 ಜನರು ಗುಣಮುಖರಾಗಿದ್ದಾರೆ. ಅದರಲ್ಲಿ ಒಟ್ಟು 20 ಜನರು ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಅವರು ತಿಳಿಸಿದ್ದಾರೆ.