Saturday, August 13, 2022

Latest Posts

ಕೊಪ್ಪಳ| ಜೂ.21ರಂದು ಮನೆಯಲ್ಲಿಯೇ ಯೋಗ ದಿನ ಆಚರಿಸಿ: ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್

ಕೊಪ್ಪಳ: ಪ್ರತಿ ವರ್ಷ ಜೂ.21 ರಂದು ಅಂತರಾಷ್ಟಿಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು, ಪ್ರಸಕ್ತ ವರ್ಷದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ‘ಯೋಗ ಫ್ರಮ್ ಹೋಮ್’ ಎಂಬ ಘೋಷ ವಾಕ್ಯದೊಂದಿಗೆ ಸಾರ್ವಜನಿಕರು ಯೋಗ ದಿನಾಚರಣೆಯನ್ನು ಮನೆಯಲ್ಲಿಯೇ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಹೇಳಿದ್ದಾರೆ.
ಹೆಚ್ಚಿನ ಜನರು ಒಂದೆಡೆ ಸೇರುವ ಸಮಾರಂಭಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ಆಯೋಜನೆಯನ್ನು ಕೋವಿಡ್-19 ಇರುವ ಕಾರಣ ಸರ್ಕಾರ ನಿಷೇಧಿಸಿರುವುದರಿಂದ ಸಾರ್ವಜನಿಕರು ಡಿಜಿಟಲ್ ಮೀಡಿಯಾದ ಸಹಾಯದೊಂದಿಗೆ ಜೂ. 21 ರಂದು ಬೆಳಗ್ಗೆ 7 ಗಂಟೆಗೆ, 2 ನಿಮಿಷ ಪ್ರಾರ್ಥನೆಯೊಂದಿಗೆ ಯೋಗ ಪ್ರಾರಂಭಿಸಿ (ಪ್ರಾರ್ಥನೆ : ಸಂಗಚದ್ವವ, ಸಂವದದ್ವಸಂವೋ ಮಾನಸಿ ಜನತ, ದೇವಭಾಗಂ ಯಥಾಪೋರ್ವೇ, ಸಂಜನಾನನ ಉಪಾಸತೆ) 45 ನಿಮಿಷ ತಮ್ಮ ಶರೀರಕ್ಕೆ ತಕ್ಕ ಯೋಗಾಸನಗಳನ್ನು ಮನೆಯಿಂದಲೇ ಮಾಡುವ ಮೂಲಕ ಯೋಗ ದಿನಾಚರಣೆಯನ್ನು ಮನೆಯಿಂದಲೇ ಆಚರಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss