ಕೊಪ್ಪಳ:ಪತ್ರಕರ್ತರ ಮೇಲೆ ನಡೆಯುವ ಹಲ್ಲೆಗಳ ತಡೆಗೆ ಕಾಯ್ದೆ ರೂಪಿಸಬೇಕು ಎಂದು ಆಗ್ರಹಿಸಿ ಕೊಪ್ಪಳ ಮೀಡಿಯಾ ಕ್ಲಬ್ ಪತ್ರಕರ್ತರಿಂದ ಮುಖ್ಯಮಂತ್ರಿಗೆ ಪತ್ರ ಚಳವಳಿ ಆರಂಬಿಸಿದ್ದಾರೆ.
ಈ ಕುರಿತು ಕೊಪ್ಪಳ ಮೀಡಿಯಾ ಕ್ಲಬ್ ನಲ್ಲಿ ಬುಧವಾರ ನಡೆದ ಸಭೆಯಲ್ಲಿ ಚರ್ಚಿಸಿ ಈ ನಿರ್ಣಯ ತೆಗೆದುಕೊಂಡು ಮುಖ್ಯಮಂತ್ರಿ ವಿಧಾನಸೌಧ ಬೆಂಗಳೂರಿಗೆ ಪತ್ರ ಚಳುವಳಿ ಆರಂಬಿಸಿದರು.
ಪತ್ರದಲ್ಲಿ ಪದೇ ಪದೆ ಪತ್ರಕರ್ತರ ಮೇಲೆ ಒಂದಿಲ್ಲ ಒಂದು ರೀತಿಯ ಹಲ್ಲೆಗಳು ನಡೆಯುತ್ತಿವೆ. ಸಮಾಜದ ಸ್ವಾಸ್ಥ ಕಾಪಾಡುವ ಶ್ರಮಿಸುವ ಪತ್ರಕರ್ತರಿಗೆ ರಕ್ಷಣೆ ಇಲ್ಲವಾಗಿದೆ. ಈಗಾಗಿ ಪತ್ರಕರ್ತರು ಜೀವದ ಭಯದಲ್ಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿ ಪತ್ರಕರ್ತರ ರಕ್ಷಣೆ ಕೂಡ ಸರಕಾರದ್ದು ಆಗಿದೆ. ಹೀಗಾಗಿ ವೈಧ್ಯರ ಹಲ್ಲೆ ತಡೆಗೆ ಇರುವ ಕಾಯ್ದೆ ವ್ಯಾಪ್ತಿಗೆ ಪತ್ರಕರ್ತರನ್ನು ಒಳಪಡಿಸಿ ಸರಕಾರ ಕ್ರಮವಕೈಗೊಳ್ಳಬೇಕು. ಈ ಕುರಿತು ಸರಕಾರ ಸಚಿವ ಸಂಪುಟದಲ್ಲಿ ನಿರ್ಧಾರ ತೆಗೆದುಕೊಂಡು ಸಮಾಜದ ಸ್ವಾಸ್ಥ ಕಾಪಾಡುವ ಶ್ರಮಿಸುವ ಪತ್ರಕರ್ತರಿಗೆ ರಕ್ಷಣೆ ನೀಡಬೇಕು. ಅದರಂತೆ ಪತ್ರಕರ್ತರಿಗೆ ವಿಶೇಷ ವಿಮೆಯನ್ನು ಸರಕಾರವೇ ಮಾಡಿಸಬೇಕು ಎಂದು ಕೊಪ್ಪಳ ಮೀಡಿಯಾ ಕ್ಲಭ್ ಪತ್ರಕರ್ತರ ಮೂಲಕ ಒತ್ತಾಯಿಸಿದರು.
ನಂತರ ಬೆಂಗಳೂರು ಕೆ.ಜಿ.ಹಳ್ಳಿ ಗಲಾಟೆ ಯಲ್ಲಿ ನಡೆದ ಪತ್ರಕರ್ತರ ಮೇಲೆ ಖಂಡನೀಯ. ಆದರೆ ಹಲ್ಲೆ ಮಾಡಿದ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ ಪ್ರಕರಣ ತನಿಖೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಸೋಮರಡ್ಡಿ ಅಳವಂಡಿ, ಸಂತೋಷ ದೇಶಪಾಂಡೆ, ದತ್ತು ಕಮ್ಮಾರ, ಶರಣುಬಸವ ಹುಲಿಹೈದರ್, ದೊಡ್ಡೇಶ ಎಲಿಗಾರ, ಮುಕ್ಕಣ್ಣ ಕತ್ತಿ, ಶಿವಕುಮಾರ ಪತ್ತಾರ, ಬಾವರಾಜ ಕರುಗೋಲ್, ಗಂಗಾಧರ ಬಂಡಿಹಾಳ, ರವಿ.ವಿ.ಕೆ. ನಾಗರಾಜ ಹಡಗಲಿ, ಶಮೀರ ಪಾಟೀಲ್, ಸೇರಿದಂತೆ ಅನೇಕರು ಭಾಗವಹಿಸಿಸ್ದರು.