Thursday, August 11, 2022

Latest Posts

ಕೊಪ್ಪಳ: ಬೆಂಗಳೂರಿಗೆ ಜಾನುವಾರು ಸಾಗಿಸುತ್ತಿದ್ದ ವಾಹನ ಹಿಡಿದ ಹಿಂದು ಪರ ಸಂಘಟನೆಗಳ ಮುಖಂಡರು

ಕೊಪ್ಪಳ: ಕೂಕನೂರಿನಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ಜಾನುವಾರು ಕಂಟೇನರ್ ವಾಹನವೊಂದನ್ನು ಹಿಂದು ಪರ ಸಂಘಟನೆಗಳ ಮುಖಂಡರು, ಹಾಗೂ ಸಾರ್ವಜನಿಕರು ಹಿಡಿದು ಫೊಲೀಸರಿಗೆ ಒಪ್ಪಿಸಿದ ಘಟನೆ ಸೋಮವಾರ ರಾತ್ರಿ ಜರುಗಿದೆ.
ಕೂಕನೂರಿನ ಹಿಮಾಲಯ ಚಿತ್ರಮಂದಿರದ ಹಿಂಬದಿಯ ಪ್ರದೇಶದಿಂದ ಪ್ರತಿ ವಾರ ಜಾನುವಾರುಗಳನ್ನು ಸಾಗಣೆ ಮಾಡುತ್ತಿರುವ ಬಗ್ಗೆ ಆಗಾಗ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಸೋಮವಾರ ರಾತ್ರಿ ಕೂಕನೂರಿನಿಂದ ಬೆಂಗಳೂರಿಗೆ ಸಾಗಿಸುತ್ತಿರುವ ಸಂದರ್ಭದಲ್ಲಿ ಐದಕ್ಕೂ ಹೆಚ್ಚು ಜಾನುವಾರಗಳನ್ನು ತುಂಬಿದ್ದ ವಾಹನವನ್ನು ಕೊಪ್ಪಳ ಲೇಬರ ವೃತ್ತದ ಬಳಿ ಹಿಂದು ಪರ ಸಂಘಟನೆಗಳ ಮುಖಂಡರು, ಕಂಟೇನರ್ ವಾಹನ ಹಿಡಿದ್ದಾರೆ. ಆದರೆ ವಾಹನ ಹಿಡಿಯುತ್ತಿದ್ದಂತೆ ಚಾಲಕ ಪರಾರಿಯಾಗಿದ್ದಾನೆ.
ನಂತರ ನಗರ ಠಾಣೆಯ ಪೊಲೀಸರು ಕಂಟೇನರ್ ವಾಹನ ಹಾಗೂ ಚಾಲಕನ್ನು ಪತ್ತೆ ಮಾಡಿ ಠಾಣೆಗೆ ಕರೆದೋಯ್ದು ವಿಚಾರಣೆ ನಡೆಸಿದ್ದಾರೆ.
ನಂತರ ಹಿಂದು ಪರ ಸಂಘಟನೆಗಳ ಮುಖಂಡ ಗವಿ ಜಂತಕಲ್ ಮಾತನಾಡಿ, ಜಿಲ್ಲೆಯಲ್ಲಿ ರೈತರ ಹೆಸರಿನಲ್ಲಿ ಜಾನುವಾರುಗಳನ್ನು ಕಸಾಯಖಾನೆಗೆ ಸಾಗಿಸುತ್ತಿರುವುದು ನಿರಂತರವಾಗಿದೆ. ಈಗ ಎಲ್ಲರೂ ಕೊರೋನಾ ನಿಯಂತ್ರಣದಲ್ಲಿ ಮಗ್ನರಾಗಿದ್ದ ಅಧಿಕಾರಿಗಳ, ಪೊಲೀಸರು ಕಣ್ಣು ತಪ್ಪಿಸಿ ಕೂಕನೂರಿನಿಂದ ಬೆಂಗಳೂರಿಗೆ ನಿರಂತರ ಸಾಗಾಟ ನಡೆದಿದೆ. ಆದರೆ ಇದಕ್ಕೆ ಕಡಿವಾಣ ಹಾಕವ ಉದ್ದೇಶದಿಂದ ಸಂಘಟನೆ ಮಾಡುತ್ತಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss