Wednesday, August 10, 2022

Latest Posts

ಕೊಪ್ಪಳ| ಬೆಳೆ ನಷ್ಟದಲ್ಲೂ ಕೃಷಿ ಕಾಯಕದಲ್ಲಿ ಮುಂದಾದ ರೈತರು: ಭರಣಿ, ಕೃತಿಕ ಹದ ಮಳೆಗೆ ಬರಪೂರ ಬಿತ್ತನೆ

ಕೊಪ್ಪಳ: ಕೊರೋಮಾ ವೈರಸ್ ಎರಡು ತಿಂಗಳು ಲಾಕ್ ಡೌನ್ ಲಾಕ್‌ಡೌನ್‌ನಿಂದ ಬೆಳೆದ ಬೆಳೆಗೆ ದರ ಸಿಗದೆ ನಷ್ಟ ಅನುಭವಿಸಿದರೂ ಕೂಡ ಅನ್ನದಾತ ಮಾತ್ರ ಕೃಷಿ ಕಾಯಕದಿಂದ ಹಿಂದೆ ಸರಿದಿಲ್ಲ. ಕೆಲ ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬಿತ್ತನೆ ಕಾರ್ಯ ಆರಂಭವಾಗಿದೆ.

ಕೃಷಿ ಇಲಾಖೆ ಬಿತ್ತನೆ ಬೀಜ ಮತ್ತು ರಾಸಾಯನಿಕ ಗೊಬ್ಬರ ದಾಸ್ತಾನು ಮಾಡಿಕೊಂಡಿದ್ದು, ರೈತ ಸಂಪರ್ಕ ಕೇಂದ್ರದಲ್ಲಿ ವಿತರಣೆ ಮಾಡಲಾಗುತ್ತಿದೆ. ಮಾಚ್೯ ತಿಂಗಳಿಂದ ಮೇ ವರೆಗೆ ೫೭ ಮಿ.ಮೀ ವಾಡಿಕೆ ಮಳೆಗೆ ೮೭ ಮಿ.ಮೀ ಮಳೆಯಾಗಿದ್ದು, ಶೇ ೮೪ ರಷ್ಟು ಹೆಚ್ಚುವರಿ ಮಳೆಯಾಗಿದೆ. ಕೊಪ್ಪಳ, ಯಲಬುರ್ಗಾ, ಗಂಗಾವತಿ, ಕುಷ್ಟಗಿ, ಕೂಕನೂರ, ಕನಕಗಿರಿ ಎಲ್ಲಾ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ರೈತರು ಭೂಮಿ ಉಳುಮೆ ಮಾಡಿ, ಬಿತ್ತನೆಗೆ ಜಮೀನು ಸಿದ್ಧಪಡಿಸುವ ಕಾಯಕ ದಲ್ಲಿ ನಿರತರಾಗಿದ್ದರೆ, ಕೊಪ್ಪಳ, ಯಲಬುರ್ಗಾ, ಕುಷ್ಟಗಿ ತಾಲೂಕಿನ ಹಳ್ಳಿಗಳಲ್ಲಿ ಹೆಸರು, ಹತ್ತಿ ಸೇರಿದ ಇನ್ನಿತರ ಬೆಳೆಗಳ ಬಿತ್ತನೆ ಕಾರ್ಯ ಆರಂಭವಾಗಿದೆ.

ಪ್ರಸ್ತುತ ಹೆಸರು, ಹತ್ತಿ ಬಿತ್ತನೆ ಬಿರುಸಿನಿಂದ ಸಾಗುತ್ತಿದ್ದು, ತೊಗರಿ ಮುಸಕಿನ ಜೋಳ ಸಹ ಬೆಳೆಯಬಹುದು. ಅಲ್ಲದೇ ಕಳೆದ ಸಾಲಿನಲ್ಲಿ ಕಾಣಿಸಿಕೊಂಡಿದ್ದ ಸೈನಿಕ ಹುಳು ಬಾಧೆ ತಪ್ಪಿಸಲು ರೈತರು ಅಗತ್ಯ ಔಷಧೋಪಚಾರ ಕೈಗೊಳ್ಳುವಂತೆ ಕೃಷಿ ಇಲಾಖೆ ಸಲಹೆ ನೀಡಿದೆ.

೭,೧೦೦ ಹೆಕ್ಟೇರ್‌ನಲ್ಲಿ ಬಿತ್ತನೆ: ಜಿಲ್ಲೆಯಲ್ಲಿ ಅಂದಾಜು ೨,೫೨, ೫೨೦ ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಪೈಕಿ ಈವರೆಗೆ ೭,೧೦೦ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಅದರಲ್ಲಿ ಹೆಸರು ೩,೮೦೦ ಹೇಕ್ಟರ್ ಬಿತ್ತನೆಯಾದರೆ, ಹತ್ತಿ ೩,೨೫೦ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಇನ್ನಮೆಲೆ ಬಿತ್ತನೆಗೆ ಮುಂದಾಗುತ್ತಿದ್ದಾರೆ.

ಇನ್ನೂ ಜೋಳ, ದ್ವಿದಳ ಧಾನ್ಯಗಳಾದ ಉದ್ದು, ಅಲಸಂದೆ ಹಾಗೂ ತೋಗರಿ ಬಿತ್ತನೆ ಆಗಬೇಕಾಗಿದೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು ಶೇ ೦೭ ರಷ್ಟು ಬಿತ್ತನೆಯಾಗಿದೆ. ಜೂಲೈ ಅಂತ್ಯದ ವೇಳೆಗೆ ನಿಗದಿತ ಗುರಿ ತಲುಪಲಾಗುವುದು. ಸರ್ಕಾರ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ನೀಡುತ್ತಿದ್ದು, ಸದುಪಯೋಗ ಪಡೆಯಬೇಕು’ ಎಂದು ಕೃಷಿ ಇಲಾಖೆ ಪತ್ರಿಕೆಗೆ ತಿಳಿಸಿದರು.

೧೩,೩೨೯ ಟನ್‌ ಗೊಬ್ಬರ ದಾಸ್ತಾನು: ‘ಬೆಳೆಗಳಿಗೆ ಕೊರತೆ ಆಗದಂತೆ ರಾಸಾಯನಿಕ ಗೊಬ್ಬರ ದಾಸ್ತಾನು ಮಾಡಲಾಗಿದೆ. ಯೂರಿಯ ೩,೫೬೨ ಟನ್‌, ಪೊಟ್ಯಾಷ್ ೯೧೩ ಟನ್‌, ಡಿಎಪಿ ೨೪೮೨ ಟನ್‌, ಕಾಂಪ್ಲೇಕ್ಸ್ ೬,೨೯೧ ಸೇರಿ ಒಟ್ಟು ೧೩,೩೨೯ ಟನ್‌ ಗೊಬ್ಬರ ದಾಸ್ತಾನು ಇದ್ದು, ರೈತರು ಆತಂಕ ಪಡುವ ಅಗತ್ಯ ಇಲ್ಲ’ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೆಲ ದಿನಗಳಿಂದ ಉತ್ತಮ ಮಳೆಯಾಗಿದೆ. ಇದರಿಂದ ಬೀಜ, ಗೊಬ್ಬರ ಕೊರತೆಯಾಗದಂತೆ ದಾಸ್ತಾನು ಮಾಡಲಾಗಿದೆ. ಕೃಷಿ ಇಲಾಖೆಯ ಸಲಹೆ, ಸೂಚನೆ ಪಾಲಿಸಿ ಬಿತ್ತನೆ ಕಾರ್ಯ ಆರಂಭಿಸಬೇಕು.

ಶಬನಾ ಎಂ. ಶೇಖ್, ಜಂಟಿ ನಿರ್ದೇಶಕಿ ಕೃಷಿ ಇಲಾಖೆ ಕೊಪ್ಪಳ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss