Saturday, August 13, 2022

Latest Posts

ಕೊಪ್ಪಳ| ಬೈಕ್ ಟಾಟಾಏಸ್ ನಡುವೆ ಅಪಘಾತ: ಗಂಭೀರ ಗಾಯಗೊಂಡಿದ್ದ ಮೂವರ ಸಾವು

ಕೊಪ್ಪಳ: ಬೈಕ್ ಮತ್ತು ಟಾಟಾ ಏಸ್ ನಡುವೆ ಗುರುವಾರ ರಾತ್ರಿ ಸಂಬವಿಸಿದ ಅಪಘಾತದ ಪರಿಣಾಮವಾಗಿ ಗಂಭೀರ ಗಾಯಗಳಾಗಿದ್ದ ಮೂವರು ಮೃತಪಟ್ಟ ಘಟನೆ ಶುಕ್ರವಾರ ಯಲಬುರ್ಗಾ ತಾಲೂಕಿನಲ್ಲಿ ಜರುಗಿದೆ.
ಮೃತರು ಬೈರಾಪೂರ ಗ್ರಾಮದ ಈರಣ್ಣ ಸಿಂದೋಗಿ(೨೬), ಚಿಕ್ಕಮ್ಯಾಗೇರಿ ಗ್ರಾಮದ ಹನಮಪ್ಪ ಉಪ್ಪಾರ(೨೬), ಧರ್ಮಪ್ಪ ಹೊಸಳ್ಳಿ (೫೫) ಎಂಬ ಮೃತ ದುರ್ದ್ಯೆವಿಗಳಾಗಿದ್ದಾರೆ.
ಗುರುವಾರ ರಾತ್ರಿ ಯಲಬುರ್ಗಾ ತಾಲೂಕಿನ ಬೇವೂರಿನಿಂದ ಚಿಕ್ಕ ಮ್ಯಾಗೇರಿಗೆ ಬೈಕ್ ಮೇಲೆ ಮೂವರು ತೆರಳುತ್ತಿದ್ದ ಸಂದರ್ಭ  ಟಾಟಾಏಸ್ ವಾಹನ ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರ ತಾಲೂಕ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೂವರು ಮೃತಪಟ್ಟಿದ್ದಾರೆ.
ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss