Monday, July 4, 2022

Latest Posts

ಕೊಪ್ಪಳ| ಮತ ಎಣಿಕೆ ಆರಂಭ: ಎಜೆಂಟರು, ಅಭ್ಯರ್ಥಿಗಳ ನೂಕು ನುಗ್ಗಲು

ಹೊಸ ದಿಗಂತ ವರದಿ ಕೊಪ್ಪಳ:

ಗ್ರಾ.ಪಂ. ಮತ ಎಣಿಕೆ ಆರಂಭವಾಗಿದ್ದು, ಮತ ಎಣಿಕೆ ಕೇಂದ್ರಕ್ಕೆ ಒಳಗೆ ಹೋಗಲು ಎಜೆಂಟರರು ಹಾಗೂ ಅಭ್ಯರ್ಥಿಗಳು ನೂಕುನುಗ್ಗಲು ಆರಂಭವಾಯಿತು.

ಕೊಪ್ಪಳ ಗವಿಸಿದ್ದೇಶ್ವರ ಹೈಸ್ಕೂಲ್ ನಲ್ಲಿ ಅಯೋಜಿಸಿದ್ದ ಮತ ಎಣಿಕೆ ಹೈಸ್ಕೂಲ್ ಆವರಣದಲ್ಲಿ ಬೆಳಿಗ್ಗೆ5 ಗಂಟೆಯಿಂದ ಮತ ಎಣಿಕೆ ಕೇಂದ್ರದ ಮುಂದೆ ಸಾವಿರಾರು ಜನರ ಜಮಾವಣೆ ಗೊಂಡಿದ್ದರು.
ಕೊರೋನಾ ಹಿನ್ನಲೆಯಲ್ಲಿ ಎಲ್ಲರೂ ಮುಂಜಾಗ್ರತ ಕೈಗೊಳ್ಳಬೇಕು ಎಂದು ಹೇಳಿದರೂ ಕೂಡ ಆವರಣದಲ್ಲಿ ಜಮಾಯಿಸಿದ್ದ ಜನರು ಹಾಗೂ ಎಜೆಂಟ್ರು ಸಾಮಾಜಿಕ ಅಂತರ ಮರೆತು ಒಳ ಹೋಗಲು ನೂಕು ನುಗ್ಗಲು ಆರಂಭವಾಯಿತು.

ಅಧಿಕಾರಿಗಳು ಎಜೆಂಟರಿಗೆ ಒಂದನೆ ಸುತ್ತು ಹಾಗೂ ಎರಡನೇ ಸುತ್ತು ಎಂದು ತಿಳಿಸದೇ ಇರುವುದರಿಂದ ಎಜೆಂಟರು ಹಾಗೂ ಅಭ್ಯರ್ಥಿಗಳು ಒಟ್ಟಿಗೆ ಒಳ ಹೋಗಲು ಮುಂದಾದರು. ಆದರೆ ಇದನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ ಪಡುವಂತಾಯಿತು. 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಬೇಕಿತ್ತು ಆದರೆ ಅರ್ದ ಗಂಟೆ ತಡವಾಗಿ ಆರಂಭವಾಯಿತು.

ಲಾಡ್ಜ್ ಗಳು ಹೌಸ್ ಪುಲ್:
ಬುಧವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗುವ ಮತ ಎಣಿಕೆಗೆ ಅಭ್ಯರ್ಥಿಗಳು ಹಾಗೂ ಎಜೆಂಟರು ಆಗಮಿಸಲು ಮಂಗಳವಾರ ರಾತ್ರಿಯೇ ಕೊಪ್ಪಳ ನಗರದಲ್ಲಿ ತಂಗಿದ್ದಾರೆ. ಇದರಿಂದ ಕೊಪ್ಪಳದಲ್ಲಿರುವ. ಎಲ್ಲಾ ಲಾಡ್ಜ್ ಗಳು ಹೌಸ್ ಪುಲ್ ಆಗಿದ್ದು ಕಂಡು ಬಂದಿತು. ಇದಲ್ಲದೆ ಯಾರಾದರೂ ಬೆರೆ ಊರಿಂದ ಆಗಮಿಸಿದ ಪ್ರಯಾಣಿಕರು ಲಾಡ್ಜ್ ಗಳು ಇಲ್ಲದೆ ಬಸ್ ನಿಲ್ದಾಣದಲ್ಲಿಯೇ ಮಲಗಿ ಬೆರೆಡಗೆ ಸಾಗಿದ್ದು ಕಂಡು ಬಂದಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss