Monday, August 8, 2022

Latest Posts

ಕೊಪ್ಪಳ| ಮದ್ಯದ ಅಮಲಿನಲ್ಲಿ ಬಾವಿಗೆ ಬಿದ್ದ ಶಂಕಿತ ವ್ಯಕ್ತಿಯ ಶವ ಪತ್ತೆ

ಕೊಪ್ಪಳ: ಮದ್ಯದ ಅಮಲಿನಲ್ಲಿ ಬಾವಿಗೆ ಬಿದ್ದ ಶಂಕಿತ ವ್ಯಕ್ತಿಯ ಶವ ಭಾನುವಾರ ಬೆಳಗ್ಗೆ ಪತ್ತೆಯಾದ ಘಟನೆ ಕೂಕನೂರು ತಾಲೂಕಿನ ಬೆಣಕಲ್ ಗ್ರಾಮದಲ್ಲಿ ನಡೆದಿದೆ.ಮೃತ ಯುವಕ ಬೆಣಕಲ್ ಗ್ರಾಮದ ಭರಮಪ್ಪ ಜಾಲಿಕುಡಿ(೨೬) ಎಂಬುದು ವ್ಯಕ್ತಿಯಾಗಿದ್ದಾನೆ.
ಬೆಣಕಲ್ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಮೃತ ಯುವಕ ಹೆಚ್ಚು ಎಣ್ಣೆ ಹೊಡೆದ ಪರುಣಾಮವಾಗಿ ಜೋಲಿ ಹೊಡೆಯುತ್ತಾ ಗ್ರಾಮದಲ್ಲಿರುವ ಪುರಾತನ ಬಾವಿಯೋಳಗೆ ಬಿದ್ದಿದ್ದಾನೆ. ಆದರೆ ಶನಿವಾರ ಇಡಿ ದಿನ ಮೃತ ಯುವಕ ಬರದಿದ್ದಾಗ ಅಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ಬಾವಿಯಯಲ್ಲಿರುವ ಹುಳಿನಲ್ಲಿ ಶವ ಇರುವುದನ್ನು ಕಂಡ ಗ್ರಾಮಸ್ಥರು ಸಿಪಿಐ ನಾಗರೆಡ್ಡಿ, ಪಿಎಸ್ಐ ಎನ್ ವೆಂಕಟೇಶ್, ಅಗ್ನಿಶಾಮಕ ಅಧಿಕಾರಿ ಸಂಗಪ್ಪ ಸಿಬ್ಬಂದಿ ಗಳೊಂದಿಗೆ ಶವವನ್ನು ಮೆಲೆತ್ತಲು ಪ್ರಯತ್ನಿಸಿದ್ದಾರೆ.
ಆದರೆ ಪುರಾತನ ಬಾವಿಯಾಗಿದ್ದರಿಂದ ಬಾವಿ ದಂಡೆ ಸುತ್ತಲು ಗಿಡ, ಕಂಟಿ ಬೆಳೆದಿದ್ದು, ನೀರು ಹಸಿರು ಬಣ್ಣಕ್ಕೆ ತಿರುಗಿದ್ದವು. ೩೦ ಪೂಟ್‌ಗಿಂತಲು ಅಗಲವಿದ್ದ ಬಾವಿಯಲ್ಲಿ ಆಳವಾದ ಸಂಗ್ರಹವಾದ ನೀರನ್ನು ಶನಿವಾರ ಇಡೀ ರಾತ್ರಿ ಮೋಟರ್ ಹಚ್ಚಿ ನೀರು ಹೊರ ಹಾಕಿ, ನಂತರ ಕ್ರೇನ್ ಸಹಾಯದಿಂದ ಕಾರ್ಯಾಚರಣೆ ನಡೆಸಿದ ಪರಿಣಾಮವಾಗಿ ಭಾನುವಾರ ಬೆಳಗ್ಗೆ ಶವ ಮೇಲೆತ್ತುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆದರೆ ಕೂಕನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮೃತ ಸಾವಿನ ಕುರಿತು ತನಿಖೆ ನಡೆಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss