Monday, July 4, 2022

Latest Posts

ಕೊಪ್ಪಳ| ಮಾಸ್ಕ್ ಧರಿಸದೇ ಇರುವವರಿಂದ ದಂಡ ವಸೂಲಿ- ರೂ.68,050 ಮೊತ್ತದ ದಂಡ ವಸೂಲಿ

ಕೊಪ್ಪಳ: ನಗರ ಪ್ರದೇಶದಲ್ಲಿ ಇಲ್ಲಿಯವರೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಇರುವುದಕ್ಕೆ ರೂ. 10,950 ಮತ್ತು ಮಾಸ್ಕ್ ಧರಿಸದೇ ಇರುವುದಕ್ಕೆ  ರೂ. 57,100 ಗಳು ಒಟ್ಟು ರೂ. 68,050 ಮೊತ್ತದ ದಂಡವನ್ನು ವಸೂಲಿ ಮಾಡಲಾಗಿದ್ದು, ಗ್ರಾಮೀಣ ಪ್ರದೆಶದಲ್ಲಿಯೂ ದಂಡ ವಸೂಲಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ಸರ್ಕಾರದ ಸುಗ್ರೀವಾಜ್ಞೆ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕು ಧರಿಸುವುದು ಅಥವಾ ಬಾಯಿ, ಮೂಗನ್ನು ಮುಚ್ಚುವ ರೀತಿ ಕರವಸ್ತçವನ್ನು ಕಟ್ಟಿಕೊಳ್ಳುವುದು ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ 1 ಮೀಟರ್ ಅಂತರದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದಕೊಳ್ಳದೇ ಇದ್ದಲ್ಲಿ ನಗರ ಪ್ರದೇಶದಲ್ಲಿ ರೂ.200, ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ರೂ. 100 ಗಳ ದಂಡವನ್ನು ವಿಧಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss