Thursday, August 11, 2022

Latest Posts

ಕೊಪ್ಪಳ| ಮೊದಲ ಬಾರಿಗೆ ಸಾವಯವ ಭತ್ತ ಬೆಳೆದು ರೈತರಿಗೆ ಮಾದರಿಯಾದ ಕಿನ್ನಾಳದ ಜಗದೀಶ ರೈತ

ಹೊಸ ದಿಗಂತ ವರದಿ, ಕೊಪ್ಪಳ:

ಸಾವಯವ ಭತ್ತವು ಇದು ಬೇರೆ ಭತ್ತಗಳಿಗಿಂತ ಹದಿನೈದು ದಿನಗಳ ಮುಂಚಿತವಾಗಿ ಕಟಾವಿಗೆ ಬರುತ್ತಿದ್ದು, ಸಾವಯುವ ಸಾವಯುವ ಭತ್ತದಿಂದ ಉತ್ತಮ ಇಳುವರಿ ಜೋತೆಗೆ ಉತ್ತಮ ಆರೋಗ್ಯ ವೃದ್ಧಿಸಲು ಸಹಕಾರಿಯಾಗುತ್ತದೆ ಎಂದು ಕೃಷಿ ವಿಸ್ತರಣಾ ಶಿಕ್ಷಣಾ ಕೇಂದ್ರದ ಮುಂದಾಳು ಡಾ. ಎಂ.ಬಿ.ಪಾಟೀಲ್ ಅಭಿಮತ ವ್ಯಕ್ತ ಪಡಿಸಿದ್ದಾರೆ.
ಅವರು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳದ ವಿಜ್ಞಾನಿಗಳು ಕಿನ್ನಾಳ ಗ್ರಾಮದ ರೈತ ಜಗದೀಶ್ ಕಿನ್ನಾಳ್ ರವರ ಸಾವಯವ ಭತ್ತದ (ಆರ್‍ಎನ್‍ಆರ್) ಕ್ಷೇತ್ರಕ್ಕೆ ಭೇಟಿ ನೀಡಿ ಸಾವಯವ ಭತ್ತದ ಅನುಭವವನ್ನು ಆ ರೈತರಿಂದ ಪಡೆದುಕೊಂಡು ಮಾತನಾಡಿದರು.
ವಿವಿಧ ಬೆಳೆಗಗಳನ್ನು ಹಾಗೂ ವಿವಿಧ ಹಣ್ಣುಗಳನ್ನು ಸಾವಯುವದಲ್ಲಿ ಬೆಳೆದಿದ್ದನ್ನು ನೋಡಲಾಗಿತ್ತು. ಆದರೆ ಮೊದಲ ಬಾರಿಗೆ ಕಿನ್ನಾಳ ರೈತರು ಸಾವಯುವ ಭತ್ತವನ್ನು ಬೆಳೆದು ಮಾದರಿಯಾಗಿದ್ದಾರೆ. ಆದರೆ. ರಸಾಯನಿಕ ಮತ್ತು ಕ್ರಿಮಿನಾಶಕ ಬಳಸಿದರೆ ಮಾತ್ರ ಭತ್ತವನ್ನು ಬೆಳೆಯಬಹುದು ಎಂದುಕೊಂಡಿದ್ದ ಅನೇಕ ರೈತರಿಗೆ ಈ ಸಾವಯುವ ಭತ್ತದ ಬೆಳೆ ಮಾದರಿಯಾಗಿದೆ. ಈ ಸಾವಯುವ ಬೆಳೆಗೆ ಹತ್ತು ಸಾವಿರ ರೂಪಾಯಿಗಳಷ್ಟು ಧನಾಮೃತವನ್ನು ಸದರಿ ಕ್ಷೇತ್ರಕ್ಕೆ ಬಳಸಲಾಗಿದೆ. ಐದು ಸಾವಿರ ರೂಪಾಯಿಗಳಷ್ಟು ಸಾವಯವ ರೂಪದ ಕೀಟನಾಶಕಗಳನ್ನು ಸಿಂಪಡಿಸಿ ಬೆಳೆ ಬೆಳೆದಿದ್ದಾರೆ. ಅಷ್ಟೇ ಅಲ್ಲದೆ ರಾಸಾಯನಿಕ ಭತ್ತದ ವೆಚ್ಚಕ್ಕಿಂತ ಐದು ಸಾವಿರದಷ್ಟು ಕಡಿಮೆ ವೆಚ್ಚದಲ್ಲಿ ಭತ್ತವನ್ನು ಬೆಳೆದು ತೊರಿಸಿದ್ದಾರೆ ಇದು ರೈತರಿಗೆ ಉತ್ತಮ ಆದಾಯದಾಯಕ ಎಂದು ಹೇಳಿದರು.
ಸಾವಯವ ಭತ್ತವು ಎಷ್ಟು ಎತ್ತರವಾಗಿ ಬೆಳೆದಿರುತ್ತದೆ ಅಷ್ಟೇ ಗಾತ್ರದ ಬೇರು ಭೂಮಿಯಲ್ಲಿ ಇಳಿದಿರುತ್ತದೆ. ಎಷ್ಟೇ ಗಾಳಿ ಮಳೆ ಬಿದ್ದರೂ ಭತ್ತವು ನೆಲಕ್ಕೆ ಉರಳುವುದಿಲ್ಲ. ಸಾವಯವ ಭತ್ತದ ಕವಲು ಸರಿಸುಮಾರು ಇಪ್ಪತ್ತರಿಂದ ಇಪ್ಪತ್ತೈದುಗಳು ಮಾತ್ರ ಇರುತ್ತವೆ. ನಾಲ್ಕರಿಂದ ಆರು ತಿಂಗಳವರೆಗೆ ಈ ಭತ್ತವನ್ನು ಮಾಗಿಸಲಾಗುವುದು ಎಂದು ಹೇಳಿದರು.
ನಂತರ ಸಾವಯವ ಭತ್ತವನ್ನು ಬೆಳೆದ ರೈತ ಜಗದೀಶ್ ಕಿನ್ನಾಳ್ ಮಾತನಾಡಿ, ಸಾವಯವ ಭತ್ತವನ್ನು ಮೊಟ್ಟ ಮೊದಲ ಬಾರಿಗೆ ಬೆಳೆದಿದ್ದು ಇದರ ಇಳುವರಿ ಆರು ತಿಂಗಳ ನಂತರ ಗೊತ್ತುಪಡಿಸಿ ತಮ್ಮ ಗಮನಕ್ಕೆ ತರಲಾಗಿದೆ. ಉತ್ತಮ ಇಳುವರಿ ಬಂದಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಡಾ. ಶೇಷಗಿರಿ ಗುಬ್ಬಿ, ಕಿನ್ನಾಳ ಗ್ರಾಮದ ಹಿರಿಯರಾದ ದೇಸಾಯಿಯವರು, ಈಶಣ್ಣ ಅಗಡಿಯವರು ಮತ್ತು ಇನ್ನಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss