ಕೊಪ್ಪಳ: ದೇಶಕ್ಕೆ ಪ್ರಧಾನಿ ಅತ್ಯಂತ ಮಹತ್ವದ ನಿರ್ಧಾರ ಹಾಗೂ ಯೋಜನೆ ಕಾರ್ಯಕ್ರಮ ಗಳನ್ನು ಜಾರಿಗೆ ತಂದಿದ್ದಾರೆ, ಅದರಂತೆ ಅಭಿವೃದ್ಧಿ ಕೆಲಸಗಳು ನಡೆಸುವ ಮೂಲಕ ಎರಡನೇ ಅವಧಿಯ ಒಂದು ವರ್ಷ ಯಶಸ್ವಿಯಾಗಿ ಪೂರೈಸಿದ್ದಾರೆ ಇವರ ಪಾರದರ್ಶಕ ಆಡಳಿತವೇ ದೇಶದ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳು ಹಾಗೂ ಮೋದಿಯವರ ಅಭಿವೃದ್ಧಿ ಆಡಳಿತ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ತ್ರಿವಳಿ ತಲಾಕ್,ಒಂದೇ ದೇಶ ಒಂದೇ ಕಾನೂನು,ಪೌರತ್ವ ತಿದ್ದುಪಡಿ ಮಾಡುವ ಮೂಲಕ ಭಾರತೀಯರಿಗೆ ತಮ್ಮ ಹಕ್ಕನ್ನು ನೀಡಿದ್ದಾರೆ, ಅಲ್ಲದೇ ರಾಮಮಂದಿರ ತೀರ್ಪು ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತೆ ವಹಿಸಿದ್ದು ಶ್ಲಾಘನೀಯ ಎಂದು ಹೇಳಿದರು.
ಕೊರೊನಾ ಮಹಾಮಾರಿ ವಿರುದ್ಧ ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಳ್ಳುವುದಲ್ಲದೆ, ದೇಶದ ಜನರು ಕೊರೊನಾ ಜೊತೆ ಬದುಕುವುದು ಕಲಿಸಿದ್ದಾರೆ, ದೇಶದಲ್ಲಿನ ಹಲವು ಸಮಸ್ಯೆಗಳಿಗೆ ಪರಿಹಾರ, ಕೊರೊನಾ ಸೋಂಕು ನಿವಾರಣೆಯಲ್ಲಿ ಗಟ್ಟಿ ನಿರ್ಧಾರ,
ಕಾರಟಗಿ ವರೆಗೆ ರೈಲು ಓಡಾಟ ಅರಂಭ ವಿವಿಧ ರೈಲು ಗೇಟ್ ಗಳ ನಿರ್ಮಾಣ ಪ್ರಗತಿಯಲ್ಲಿ ಇದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್ ಮಾತನಾಡಿ, ನಿಚ್ಚಳ ಬಹುಮತದೊಂದಿಗೆ ಎರಡನೇ ಬಾರಿ ದೇಶದ ಚುಕ್ಕಾಣಿ ಹಿಡಿದ ಮೋದಿಯವರ ಬಿಜೆಪಿ ಪಕ್ಷ ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎರಡನೇ ಅವಧಿಯಲ್ಲಿ ಒಂದು ವರ್ಷದ ಪೂರ್ಣಗೊಂಡ ಹಿನ್ನೆಲೆ ಆತ್ಮನಿರ್ಭರ ಎಂಬ ಪ್ಯಾಕೇಜ್ ನೀಡಲಾಗಿದೆ ಎಂದರು. ಅಲ್ಲದೇ, ಜಿ.ಪಂ ಅಧ್ಯಕ್ಷ ವಿರುದ್ಧ ಅವಿಶ್ವಾಸ ನಿರ್ಣಯ ಮಾಡಲು ಕಾಂಗ್ರೆಸ್ ಪಕ್ಷ ಮುಂದಾಗಿದೆ ಇದನ್ನು ನಾವು ವಿರೋಧಿಸುತ್ತೆವೆ, ನಮ್ಮ ಪಕ್ಷದ ಯಾವುದೇ ಸದಸ್ಯರು ಬಿಜೆಪಿ ಸೇರಲು ಬಿಡುವುದಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಶಾಸಕರಾದ ಜಿ.ವೀರಪ್ಪ, ಕೆ.ಶರಣಪ್ಪ. ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಹಲಗೇರಿ, ನವೀನಕುಮಾರ ಗುಳಗಣ್ಣನವರ, ಶಂಕರಗೌಡ, ಬಸಲಿಂಗಯ್ಯ ಗದುಗಿನಮಠ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.