Monday, August 8, 2022

Latest Posts

ಕೊಪ್ಪಳ| ಯುವಕನ ಕೈಯಲ್ಲಿನ ಮೊಬೈಲ್ ಸೆಟ್ ಬ್ಲಾಸ್ಟ್ : ತಲ್ಲಣಗೊಂಡ ಜನತೆ..!

ಕೊಪ್ಪಳ : ಯುವನ ಕೈಯಲ್ಲಿದ್ದ ಮೊಬೈಲವೊಂದು ಬ್ಲಾಸ್ಟ್ ಆಗಿರುವ ಘಟನೆಯಿಂದ ನಗರದ ಜನತೆ ತಲ್ಲಣಗೊಂಡಿದ್ದಾರೆ..!
ಕೊಪ್ಪಳ ತಾಲೂಕಿನ ಕವಲೂರು ಗ್ರಾಮದ ಗವಿಸಿದ್ಧೇಶ್ವರ ಹೆಸರೂರು ಎಂಬ ಯವಕನ ಎಂ.ಐ. ನೋಟ್-4 ಎನ್ನಲಾದ ಕಂಪನಿಯ ಮೊಬೈಲ್ ಸೆಟ್ ಏಕಾ ಏಕಿಯಾಗಿ ಆರಂಭದಲ್ಲಿ ಮೊಬೈಲ್ ಮೂಲಕ ಹೊಗೆ ಬಂದಿದೆ. ಎಚ್ಚತ್ತುಕೊಂಡು ಯುವಕ ಕೈಯಲ್ಲಿದ್ದ ಮೊಬೈಲ್ ಕೆಳಗಡೆಗೆ ಹಾಕಿದ್ದಾನೆ. ಮೊಬೈಲ್ ಕೆಳಗಡೆ ಕೈ ಬಿಡುತ್ತಿದ್ದಂತೆ ಹೊಗೆಯ ಜೊತೆಗೆ ಬ್ಲಾಸ್ಟ್ ಕೂಡಾ ಆಗಿದೆ.

ನಗರದ ಎಪಿಎಂಸಿ ಗಂಜನಲ್ಲಿರುವ ಆರ್.ಡಿ.ಸಿ.ಸಿ‌ ಬ್ಯಾಂಕ್ ಮುಂಭಾಗದಲ್ಲಿ ನಡೆದಿರುವ ಘಟನೆಗೆ ಗಂಜನಲ್ಲಿದ್ದವರು ಮೊಬೈಲ್ ಬ್ಲಾಸ್ಟ್ ನಿಂದ ಕೆಲ ಸಮಯ ಗಾಬರಿಗೊಳಗಾದ ಘಟನೆ ಕೂಡಾ ಜರುಗಿತು. ಬ್ರ್ಯಾಂಡ್ ಕಂಪನಿ ಎಂದು ಬಹು ಪ್ರಚಾರದಲ್ಲಿರುವ ಎಂ.ಐ ಕಂಪನಿ ಮೊಬೈಲ್ ಸೆಟ್ ಒಂದು ವೇಳೆ ಜೇಬಿನಲ್ಲಿ ಬ್ಲಾಸ್ಟ್ ಆಗಿದ್ದರೆ, ಯುವಕನ ಪರಿಸ್ಥಿತಿ ಅದೊಗತಿ, ಸ್ವಲ್ಪದರಲ್ಲಿಯೇ ಸಂಭವಿಸಬಹುದಾ ಬಹು ದೊಡ್ಡ ಘಟನೆ ಕೈ ತಪ್ಪಿಹೋಗಿದೆ ಎಂದು ಸ್ಥಳದಲ್ಲಿವರು ಮಾತನಾಡಿಕೊಂಡಿದ್ದು ಕೇಳಿಬಂದಿತು. ಈಗಾಗಲೇ ಕೊರೋನಾ ವೈರಸ್ ಹರಡುವ ಬೀತಿಯಲ್ಲಿದ್ದವರಿಗೆ ಈ ಮೊಬೈಲ್ ಬ್ಲಾಸ್ಟ್ ಪ್ರಕರಣವು ನಗರದ ಜನತೆಯನ್ನು ಮತ್ತೊಂದು ಭಯ, ಬೀತಿಗೆ ಕಾರಣವಾಗಿರುವುದಂತು ಸತ್ಯ..!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss