ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊಪ್ಪಳ| ರಸ್ತೆ ಅಪಘಾತ ಕುರಿತು ಜನ ಜಾಗೃತಿ ಅಭಿಯಾನ: ಜಿಲ್ಲಾ ಎಸ್ಪಿ ಟಿ.ಶ್ರೀಧರ್ ಚಾಲನೆ

ಹೊಸದಿಗಂತ ವರದಿ,ಕೊಪ್ಪಳ:

ಕೊಪ್ಪಳ ಜಿಲ್ಲಾ ಪೊಲೀಸ್ ಹಾಗೂ ಕೊಪ್ಪಳ ಉಪವಿಭಾಗ ಸಹಯೋಗದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಆಯೋಜಿಸಿದ್ದ. ರಸ್ತೆ ಅಪಘಾತಗಳ ಕುರಿತು ಜನ ಜಾಗೃತಿ ಅಭಿಯಾನ ಬೈಕ್ ರಾಲಿಗೆ ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಟಿ.ಶ್ರೀಧರ್ ಅವರು ಗುರುವಾರ ಬೆಳಿಗ್ಗೆ ಚಾಲನೆ ನೀಡಿದರು.

ನಗರದ ಅಶೋಕ ವೃತ್ತದಲ್ಲಿ ನಿಂತಿದ್ದ ಸುಮಾರು 100ಕ್ಕೂ ಹೆಚ್ವು ಪೊಲೀಸರ ಬೈಕ್ ರಾಲಿಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡುವುದರ ಮೂಲಕ ತಾವೇ ಸ್ವತ ಬೈಕ್ ಹತ್ತಿ ಬೈಕ್ ರಾಲಿಯಲ್ಲಿ ಸಾಗಿ ಎಲ್ಲರ ಗಮನ ಸೇಳೆದರು. ನಗರದ ಅಶೋಕ ವೃತ್ತದಿಂದ ಆರಂಭವಾದ ಬೈಕ್ ರಾಲಿ, ಬಸವೇಶ್ವರ ವೃತ್ತ, ಗಡಿಯಾರ ಕಂಭ ಬಸ್ ನಿಲ್ದಾಣ ಮೂಲಕ ಬಾಗ್ಯನಗರದಲ್ಲಿ ಬೈಕ ರಾಲಿ ನಡೆಸಿದರು.

ಅದರಂತೆ ಗ್ರಹ ರಕ್ಷಕ ದಳದವರಿಂದಲೂ ಕೂಡ ನಗರದ ವಿವಿಧ ವೃತ್ತಗಳಲ್ಲಿ ರಸ್ತಾ ಸುರಕ್ಷತಾ ಪಲಕಗಳನ್ನು ಹಿಡಿದು ಪಾದಯಾತ್ರೆ ಮಾಡುವ ಮೂಲಕ ಜಾಗೃತಿ ಮೂಡಿಸಿದರು. ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆಯ ನಿಯಮ ಪಾಲನೆ ಇಲ್ಲದೆ ಹಾಗೂ ಕಡ್ಡಾಯವಾಗಿ ಹೆಲ್ಮೇಟ್ ಹಾಕದೇ ಇರುವುದರಿಂದ ಕಳೆದ ಮೂರು ವರ್ಷದಲ್ಲಿ 609 ಘೋರ ಅಪಘಾತಗಳು ಆಗುವುದರ ಮೂಲಕ 648 ಜನ ಸವಾರರು ಮೃತಪಟ್ಟು, 2501 ಜನರು ಗಾಯಗಳಾಗಿದ್ದು ಆತಂಕಕಾರಿಯಾಗಿದೆ.

ಆದ್ದರಿಂದ ಇಂತಹ ಅಪಘಾತಗಳನ್ನು ತಪ್ಪಿಸಲು ಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹದ ಮೂಲಕ ಹೆಲ್ಮೇಟ್ ಇಲ್ಲದೆ. ವಾಹನ ಚಲಾಯಿಸಬೇಡಿ, ಸೀಟ್ ಬೆಲ್ಟ್ ಹಾಕದೇ ವಾಹನ ಚಲಾಯಿಸಬೇಡಿ, ಮಧ್ಯ ಪಾನ ಮಾಡಿ ಹಾಗೂ ಮೋಬೈಲ್ ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸಬೇಡಿ ಮತ್ತು ಇಂದಿನಿಂದ ಕಡ್ಡಾಯವಾಗಿ ಸವಾರರು ಹಾಗೂ ಹಿಂಬದಿ ಸವಾರರು ಹೆಲ್ಮೇಟ್ ಧರಿಸಬೇಕು ಎಂದು ಜಾಗೃತಿ ಮೂಡಿಸಿದರು.

ಈ ಸಂದರ್ಭ ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ವಿಶ್ವನಾಥ ಹಿರೇಗೌಡ್ರ, ಪಿಐ ಮಾರುತಿ ಬುಳ್ಳಾರಿ, ವೇಂಕಟೇಶ, ಫಕಿರಮ್ಮ, ಮಹಾಂತೇಶ ಮೇಟಿ ಇನ್ನಿತರರು ಉಪಸ್ಥಿತರಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss