Sunday, August 14, 2022

Latest Posts

ಕೊಪ್ಪಳ| ಲಾಕ್ ಡೌನ್ ಹಿನ್ನೆಲೆಯಲ್ಲಿ ಡಾಂಬರಿಕರಣ ಕಾಮಾಗಾರಿ ಕಳೆಪೆ : ಕ್ರಮಕ್ಕೆ ರೈತರ ಆಗ್ರಹ

ಕೊಪ್ಪಳ: ಯರೇಹಂಚಿನಾಳ ಗ್ರಾಮದಿಂದ ನೆರೆಗಲ್ಲ್ ಫಟ್ಟಣಕ್ಕೆ ಹೊಗುವ ಈ ರಸ್ತೆಯನ್ನು ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾರು ಹೆಳೊರಿಲ್ಲ, ಕೇಳೋರಿಲ್ಲ ಎಂದು ತಿಳಿದ ಗುತ್ತಿಗೆದಾರರು ತಮಗೆ ಮನಬಂದಂತೆ ಡಾಂಬರಿಕರಣ ರಸ್ತೆ ಕಾಮಾಗಾರಿಯನ್ನು ಕಳೆಪೆ ಕಾಮಗಾರಿ ನಡೆಸಿದ್ದಾರೆ. ಕೂಡಲೆ ತನಿಖೆ ನಡೆಸಿ ತಪ್ಪಿತಸ್ಥ ಗುತ್ತಿಗೆದಾರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟನೆಯ ಮೂಲಕ ಆಗ್ರಹಿಸಿದ ಅವರು, ಕುಕನೂರು. ತಾಲೂಕಿನ ಯರೇಹಂಚಿನಾಳ ಗ್ರಾಮದಿಂದ ನೆರೆಗಲ್ ಗೆ ಹೊಗುವು ಈ ರಸ್ತೆ ಗದಗ ಜಿಲ್ಲೆಗೆ ಹೊಂದಿಕೊಂಡಿದೆ. ನೆರೆಗಲ್ಲ್ ಪಟ್ಟಣದಿಂದ ಹಾದುಹೋಗುವ ಈ ರಸ್ತೆ ನೆರವಾಗಿ ರೋಣ ಹೋಳೆ ಆಲೂರು ಇತರೆ ಊರುಗಳಿಗೆ ಹೊಗುವ ರಸ್ತೆಯಾಗಿದೆ. ಆದರೆ ಮಳೆಗಳಿಗೆ ಹದಗೆಟ್ಟು ಹೋಗಿತ್ತು. ಇದರಿಂದ ಈ ಭಾಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಹಾಗೂ ರೈತರಿಗೆ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಇದರಿಂದ ಸರಕಾರ ರಸ್ತೆ ಅಭಿವೃದ್ದಿಗೆ ಮುಂದಾಗಿದ್ದಾರೆ. ಆದರೆ ಗುತ್ತಿಗೆದಾರರು ಮಾಡುವ ರಸ್ತೆಯನ್ನು ನಕ್ಷೆಯ ಪ್ರಕಾರ ಮಾಡದೇ ಕಳೆಪೆ ಮಟ್ಟದಲ್ಲಿ ಮಾಡಿದ್ದಾರೆ ಎಂದು ಆರೋಪಿಸಿದರು.

ಆದರೆ ಈ ಹೋಸ ರಸ್ತೆ ಕಾಮಾಗಾರಿಯನ್ನು ಪ್ಯಾಚ ವರ್ಕಮಾಡಿ ಕೈ ತೋಳೆದುಕೊಂಡಿದ್ದರೆ. ಇದರಿಂದ ಈರಸ್ತೆಯು ಎಲ್ಲಂದರಲ್ಲಿ ಇನ್ನೂ ಮಳೆಗಾಲ ಇಲ್ಲದೆ ಕಿತ್ತು ಹೋಗರಾಂಬಿಸಿದೆ. ಈ ರಸ್ತೆಯ ಮೂಲಕ ಸಂಚರಿಸುವ ವಾಹನಗಳು ತುಂಬಾ ತೊಂದರೆ ಅನುಭವಿಸುವಂತಾಗಿದೆ.

ಅದಲ್ಲದೆ ಅನೇಕ ರೈತರಿಗೂ ಕೂಡ ತುಂಬಾ ತೊಂದರೆಯಾಗಿದೆ. ಆದ್ದರಿಂದ ಈ ರಸ್ತೆಯನ್ನು ಶೀಘ್ರದಲ್ಲೇ ಸಮಂದಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಈ ಭಾಗದ ರೈತರು, ಗ್ರಾಮಸ್ಥರು ಕೂಡಿಕೊಂಡು ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರೈತ ಮುಖಂಡರಾದ ಮುತ್ತಪ್ಪ ಕೋಳೂರ. ಮಲ್ಲಪ್ಪ ಹನಸಿ.ವಸಂತ ಗಾಣೆಗೇರ, ಶಶಿಧರ ಹನಸಿ, ಬಸವಾರಾಜ ಚಿತವಾಡಗಿ, ಚನ್ನಪ್ಪ ನಾಲವಾಡ, ಕಿರಣ ಸಿಳಿನ, ಸುರೇಶ ಕಮತರ, ರವಿ ಜಕ್ಕಲ್ಲಿ, ಶಂಕ್ರಪ್ಪ ನೆರೆಗಲ್ಲ್, ಶಿವನಂದಪ್ಪ ಗಾಣೆಗೇರ, ಈರಪ್ಪ ಕಮತರ, ಶೆಖಪ್ಪ ಅಸೂಟಿ, ಬಸಪ್ಪ ಗುಡಿಮ್ಮಿ, ಹನಮಂತ ಮೇಟಿ, ಇತರರು ಆಗ್ರಹಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss