Thursday, July 7, 2022

Latest Posts

ಕೊಪ್ಪಳ| ಲಾರಿ ಅಪಘಾತಕ್ಕೆ ಚಿರತೆ, ನಾಯಿ ಬಲಿ

ಕೊಪ್ಪಳ: ನಾಯಿಯನ್ನು ಹೊತ್ತೋಯ್ಯುತ್ತಿದ್ದ ಚಿರತೆಗೆ ಲಾರಿ ಅಪಘಾತವಾವಾದ ಪರಿಣಾಮ ಸ್ಥಳದಲ್ಲಿ ಚಿರತೆ ಮತ್ತು ನಾಯಿ ಬಲಿಯಾದ ಘಟನೆ ಕೊಪ್ಪಳದ ಗಂಗಾವತಿ ತಾಲೂಕಿನ ಹೇಮಗುಡ್ಡ ಗ್ರಾಮದ ಬಳಿ ಗಂಗಾವತಿ -ಕೊಪ್ಪಳ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗಿನ ಜಾವ ನಡೆದಿದೆ.

ಹೆಮಗುಡ್ಡದಲ್ಲಿ ವಾಸವಾಗಿದ್ದ ಚಿರತೆ ಅನೇಕ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಾ ಸಾಗಿತ್ತು. ಅದರಂತೆ ಇಂದು ಬೆಳಗಿನ ಜಾವ ನಾಯಿಯ ಮೆಲೆ ದಾಳಿ ಮಾಡಿ ನಾಯಿಯನ್ನು ಹೊತ್ತೊಯ್ಯುತ್ತಿದ್ದ ಸಂದರ್ಭದಲ್ಲಿ ಲಾರಿ ಡಿಕ್ಕೆ ಹೊಡೆದಿದೆ. ಆದರೆ ಡಿಕ್ಕಿ ಹೊಡೆದ ರಬಸಕ್ಕೆ ಚಿರತೆ ಮತ್ತು ನಾಯಿ ಲಾರಿಗೆ ಸಿಲುಕಿ ಸಾವಿಗಿಡಾಗಿವೆ.

ಅಪಘಾತವಾದ ಬಳಿಕ ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ. ಆದರೆ ಹೇಮಗುಡ್ಡದ ಗುಡ್ಡಗಾಡು ಪ್ರದೇಶದಲ್ಲಿ ಅತಿ ಹೆಚ್ಚು ವಾಸವಾಗಿರೋ ಚಿರತೆಗಳು. ಹಾಗೂ ಕರಡಿ ಇನ್ನಿತರ ಪ್ರಣಿಗಳಿಗೆ ವಾಸಿಸಲು ಸರಿಯಾದ ರಕ್ಷಣೆ ಇಲ್ಲದೆ. ಆಹಾರಕ್ಕಾಗಿ ಗುಡ್ಡಗಾಡು ಸುತ್ತ ಮುತ್ತ ಗ್ರಾಮಗಳಿಗೆ ನುಗ್ಗಿ ಪ್ರಾಣಿಗಳ ಮೆಲೆ ದಾಳಿ ನಡೆಸುತ್ತವೆ.

ಆದರೆ ಸುದ್ದಿ ತಿಳಿದ ಅರಣ್ಯ ಇಲಾಖೆ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss