Wednesday, August 10, 2022

Latest Posts

ಕೊಪ್ಪಳ| ಸಣ್ಣ ಸಣ್ಣ ಕೈಗಾರಿಕೆಗಳಿಂದ ನಿರುದ್ಯೋಗಕ್ಕೆ ಮುಕ್ತಿ: ಸಚಿವ ಜಗದೀಶ ಶೆಟ್ಟರ

ಕೊಪ್ಪಳ: ಸಣ್ಣ ಸಣ್ಣ ಕೈಗಾರಿಕೆಗಳಿಂದ ಯುವಕರಿಗೆ ಹಾಗೂ ಸ್ಥಳೀಯರಿಗೆ ಉದ್ಯೋಗಗಳು ಹೆಚ್ಚಿ ನಿರುದ್ಯೋಗ ಸಮಸ್ಯೆ ಬಗೆಹರಿಸಲು ಸಾದ್ಯವಾಗುತ್ತದೆ ಬೃಹತ್ ಮತ್ತು ಮದ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಅವರು ಕೈಗಾರಿಕೆಗಳ ಅಭಿವೃದ್ದಿ ನಿಗಮ ನಯಮಿತ ಬೆಂಗಳೂರು ಅವರಿಯಿಂದ ಬಸಾಪೂರ- ಕೊಪ್ಪಳ ಕೈಗಾರಿಕಾ ವಸಾಹತುವನ್ನು ಉದ್ಘಾಟಿಸಿ ಮಾತನಾಡಿದರು.
ಕೇವಲ ಬೆಂಗಳೂರಿಗೆ ಸಿಮಿತವಾಗಿದ್ದ ಕೈಗಾರಿಕೆಗಳು ಗ್ರಾಮೀಣ ಭಾಗಕ್ಕೂ ನೀಡುವ ಉದ್ದೇಶದಿಂದ ರಾಜ್ಯದ ಮುಖ್ಯಮಂತ್ರಿ ಕೈಗಾರಿಕೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಸಣ್ಣ ಸಣ್ಣ ಕೈಗಾರಿಕೆಗಳು ಸ್ಥಾಪಿಸಲು ಉದ್ಯಮಿಗಳು ಹೆಚ್ವು ಬರುತ್ತಾರೆ. ಇದರಿಂದ ನಿರುದ್ಯೋಗ ಸಮಸ್ಯೆ ಬಗೆ ಹರಿಯಲಿವೆ ಎಂದು ಹೇಳಿದರು.
ಹೊಸ ಕೈಗಾರಿಕ ನಿತಿ ಜಾರಿಗೆ ತರಲಾಗುತ್ತಿದೆ ಅದರಂದ ಕೈಗಾರಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಅದರಂತೆ ಭೂ ಸುದಾರಣೆ ಕಾಯ್ದೆ ಜಾರಿಗೆ ತರುವ ಮೂಲಕ ರಾಜ್ಯದಲ್ಲಿ ಹೆಚ್ವು ಕೈಗಾರಿಕೆಗೆ ಒತ್ತು ನೀಡುವುದರ ಜೋತೆಗೆ ಯುವಕರಿಗೆ ಕೃಷಿಯ ಜೋತೆಗೆ ಉದ್ಯೋಗ ನೀಡಲು ಮುಂದಾಗುವುದಾಗಿದೆ ಎಂದರು.
ಕೊರೋನಾ ನಿಯಂತ್ರಣ ಮಾಡಲು ಕೇಂದ್ರದ ಪ್ರಧಾನಮಂತ್ರಿ ಶ್ರಮವಹಿಸಿದ್ದಾರೆ. ಇದಕ್ಕೆ ಉದಾಹರಣೆ ಸಾವಿನ ಸಂಖ್ಯೆ ನೋಡಿದರೆ ಗೊತ್ತಾಗುತ್ತದೆ. ಆದ್ದರಿಂದ ಜನರು ಸರಕಾರದ ಮೇಲೆ ಅವಲಂಬಿತವಾಗದೇ ತಾವೇ ಸ್ವಯಂ ಪ್ರೇರಿತವಾಗಿ ಕೊರೋನಾ ನಿಯಂತ್ರಿಸುವಲ್ಲಿ ಮಾಸ್ಕ್, ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುಲ್ಲಿ ಮುಂದಾಗಬೇಕು ಅಂದಾಗ ಕೊರೋನಾ ನಿಯಂತ್ರಣ ಸಾಧ್ಯ ಎಂದು ಹೇಳಿದರು.
ಚಿನಾ ಅಕ್ರಮ ನಿತಿಯನ್ನು ನಾವು ಖಂಡಿಸುತ್ತವೆ. ಆದರೆ ಅದಕ್ಕೆ ಪ್ರತ್ತ್ಯತ್ತರ ನೀಡಲು ಕೇಂದ್ರ ಸರಕಾರ ಸಿದ್ದವಾಗಿದೆ. ಅದಕ್ಕೆ ಪ್ರಧಾನ ಮಂತ್ರಿ ಅವರು ಭರವಸೆ ನೀಡಿದ್ದಾರೆ ಎಂದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ಕೃಷಿಯ ಜೋತೆ ಕೈಗಾರಿಕೆಗಳನ್ನು ಬೆಳಸಬೇಕಾಗಿದೆ. ಆದರೆ ದೇಶಿಯ ವಸ್ತುಗಳನ್ನು ತಯಾರು ಮಾಡುವ ಉದ್ದೇಶದಿಂದ ನರೇಂದ್ರ ಮೋದಿಯವರು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೃಷಿಯ ಜೋತೆ ಜೋತೆಗೆ ಕೈಗಾರಿಕೆಗಳನ್ನು ಬೆಳೆಸಲು ಮುಂದಾಗಿರುವುದು. ಶ್ಲಾಘನೀಯ ಎಂದು ಹೇಳಿದ ಅವರು, ಜಿಲ್ಲೆಯಲ್ಲಿ ಅನೇಕ ಕಾರ್ಖಾನೆಗಳು ಇದ್ದರೂ ಕೂಡ ಸ್ಥಳೀಯ ಜನರಿಗೆ ಕೆಲಸ ಸಿಗುತ್ತಿಲ್ಲವಾಗಿದೆ. ಅದರಂತೆ ದೂಳಿನಿಂದ ರೈತರ ಬೆಳೆಗಳು ಕೂಡ ಹಾಳಾಗುತ್ತಿದ್ದು, ಅದಕ್ಕೂ ಪರಿಹಾರ ಸಿಗುತ್ತಿಲ್ಲ. ಆದ್ದರಿಂದ ಅದು ಹೋಗಿ ಸ್ಥಳೀಯರಿಗೆ ಉದ್ಯೋಗ ಸಿಗುವಂತಾಗಬೇಕು ಎಂದು ಮನವಿಸಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಜಿಲ್ಲೆಯಾದ ನಂತರ ದೊಡ್ಡ ದೊಡ್ಡ ಕಾರ್ಖಾನೆಗಳು ಬಂದರೂ ಕೂಡ ಜಿಲ್ಲೆಯ ಅಭಿವೃದ್ಧಿಯಾಗುತ್ತಿಲ್ಲವಾಗಿದೆ. ಆದರೆ ಈ ಭಾಗದಲ್ಲಿ ಸ್ಟೀಲ್ ಪಾಕ್೯ ಎಂದು ಘೋಷಣೆ ಮಾಡಬೇಕು ಎಂದು ಹೇಳಿದ ಅವರು ಈ ಭಾಗದ ಕೈಗಾರಿಕೆಗಳು ಬಂದ ನಂತರ ಕೃಷಿ ಕೂಡ ಮರಿಚಿಕೆ ಯಾಗುತ್ತಾ ಸಾಗಿದೆ. ಆದರೆ ರೈತರ ಮಕ್ಕಳು ಇಂದು ನಿರುದ್ಯೋಗ ಸಮಸ್ಯೆಯನ್ನು ಎದುರಿಸವುಂತಾಗಿದೆ. ಆದ್ದರಿಂದ ಹೆಚ್ಚು ಸ್ಟೀಲ್ ವರ್ಕಿಂಗ್ ಮಾಡುವುದರ ಜೋತೆಗೆ ಕೊರೋನಾ ನಿಮಿತ್ಯವಾಗಿ ಬೇರೆ ಬೆರೆ ರಾಜ್ಯದಿಂದ ಕಾರ್ಮಿಕರು ಹಾಗೂ ಉದ್ಯೋಗಿಗಳು ಮರಳಿ ಜಿಲ್ಲೆಗೆ ಆಗಮಿಸಿದ್ದಾರೆ. ಆದ್ದರಿಂದ ಈ ಭಾಗದ ಜನರಿಗೆ ಉದ್ಯೋಗ ನೀಡುವ ಕೆಲಸ ಆಗಬೇಕು ಎಂದು ಮನವಿಸಿದರು.
ಸಂಸದ ಸಂಗಣ್ಣ ಕರಡಿ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ತಾ.ಪಂ.ಅಧ್ಯಕ್ಷ ಬಾಲಚಂದ್ರನ್,ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ, ತಹಶಿಲ್ದಾರ ಜೆ.ಬಿ ಮಜ್ಜಗಿ, ಬಿಜೆಪಿ ಮುಖಂಡ ಅಮರೇಶ ಕರಡಿ, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರ ಶೇಖರ, ಅನೇಕರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss