Sunday, August 14, 2022

Latest Posts

ಕೊಪ್ಪಳ ಸೇರಿ ರಾಜ್ಯದ 4 ಕಡೆ ಖೆಲೋ ಇಂಡಿಯಾ ಕ್ರೀಡಾಂಗಣ ನಿರ್ಮಾಣಕ್ಕೆ ಕೇಂದ್ರದಿಂದ ರೂ.19.50ಕೋಟಿ ಬೀಡುಗಡೆ

ಹೊಸ ದಿಗಂತ ವರದಿ, ಕೊಪ್ಪಳ:

ಹಿಂದುಳಿದ ಭಾಗದ ಕ್ರೀಡಾಳುಗಳ ಅನುಕೂಲ ಹಾಗೂ ಉತ್ತೇಜನಕ್ಕಾಗಿ ಕೊಪ್ಪಳ ಜಿಲ್ಲಾ ಕ್ರೀಡಾಂಗಣಕ್ಕೆ 4.5 ಕೋಟಿ ಸೇರಿದಂತೆ ರಾಜ್ಯದ ನಾಲ್ಕು ಕಡೆ ಕೇಂದ್ರ ಸರ್ಕಾರ ಖೇಲೋ ಇಂಡಿಯಾ ಯೋಜನೆ ಅಡಿ 19.50 ಕೋಟಿ ಮಂಜೂರು ಮಾಡಿದ್ದು, ಕ್ರೀಡಾ ಪ್ರೇಮಿಗಳಲ್ಲಿ ಸಂತಸ ತಂದಿದೆ.
ಈ ಕುರಿತು ಸಂಸದ ಸಂಗಣ್ಣ ಕರಡಿಯ ಪ್ರಯತ್ನದ ಫಲದಿಂದಾಗಿ ಕೇಂದ್ರ ಸರಕಾರದ ಯುವಜನ ಸೇವೆ ಮತ್ತು ಕ್ರೀಡಾ ಪ್ರಾಧಿಕಾರ ರಾಜ್ಯದ ಸಬಲಿಕರಣ ಮತ್ತು ಕ್ರೀಡಾ ಇಲಾಖೆಗೆ ಖೇಲೋ ಇಂಡಿಯಾ ಮಂಜೂರು ಮಾಡಿ ಆದೇಶ ಹೋರಡಿಸಿದ್ದು, ಕ್ರೀಡಾಭಿಮಾನಿಗಳಲ್ಲಿ ಉತ್ಸಾಹ ಇಮ್ಮಡಿಗೊಳಿಸಿದೆ.
18 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಜಿಲ್ಲಾ ಕ್ರೀಡಾಗಣದಲ್ಲಿ ಈಗಾಗಲೇ ಈಜುಗೊಳ, ಒಳಾಂಗಣ ಕ್ರೀಡಾಂಗಣ, ಸ್ಕೇಟಿಂಗ್ ಮೈದಾನ, ವಸತಿ ನಿಲಯ ಮತ್ತು ಸಂಬಂಧಿಸಿದ ಕಚೇರಿಗಳು ಕಾರ್ಯನಿರ್ವಹಿಸುತ್ತದೆ. ಬೃಹತ್ ಮೈದಾನ ಇನ್ನೂ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಂಡಿಲ್ಲ. ಇಷ್ಟೆಲ್ಲ ಕೊರತೆಗಳ ಮಧ್ಯೆಯೂ, ಹೋಬಳಿ, ತಾಲ್ಲೂಕು, ಜಿಲ್ಲಾ, ವಿಭಾಗಮಟ್ಟದ ಕ್ರೀಡೆಗಳು ಇಲ್ಲಿ ನಡೆದಿವೆ. ಈ ಕುರಿತು ಕ್ರೀಡಾಪ್ರೇಮಿಗಳು, ಆಸಕ್ತರು, ಸಂಘಟನೆಯ ಮುಖಂಡರು ಸಂಬಂಧಿಸಿದ ಸಚಿವಾಲಯಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರು.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಪ್ರಸ್ತಾವ ಸಲ್ಲಿಸಿತ್ತು. ಅದರಂತೆ ಸಂಸದ ಸಂಗಣ್ಣ ಕರಡಿ ಹೆಚ್ಚು ಆಸಕ್ತಿ ಮೇರೆಗೆ ಕ್ರೀಡಾಂಗಣಾ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಕೊಪ್ಪಳಕ್ಕೆ 4.5 ಕೋಟಿ ಸೇರಿದಂತೆ ಕಾರ್ಕಳ, ಚಿಕ್ಕಮಗಳೂರು, ಸೇರಿ 19.50 ಅನುದಾನ ಬಿಡುಗಡೆ ಮಾಡಿರುವುದರಿಂದ ಕ್ರೀಡಾಭಿಮಾನಿಗಳಲ್ಲಿ ನೆಮ್ಮದಿ ಮೂಡಿಸಿದೆ.
ಕ್ರೀಡಾಂಗಣದಲ್ಲಿ ಒಳಾಂಗಣ ಕ್ರೀಡೆಗೆ ಬಹುಉದ್ಧೇಶಿತ ಕ್ರೀಡಾ ಸಂಕೀರ್ಣ, 4 ಸಿಂಥೆಟಿಕ್ ಟ್ರ್ಯಾಕ್, ಶೆಟಲ್ ಕೋರ್ಟ್, ಬ್ಯಾಡ್ಮಿಂಟನ್ ಹಾಲ್, ಟೇಬಲ್ ಟೆನ್ನಿಸ್, ಬಾಸ್ಕೆಟ್ ಬಾಲ್ ಹಾಲ್, ಫುಟ್‍ಬಾಲ್ ಕ್ರೀಡಾಂಗಣ, ಚೆಸ್, ಕೇರಂ ಪೋರಂ, ಅರೋಬಿಕ್ಸ್, ಮಹಿಳೆ ಮತ್ತು ಪುರುಷರ ಜಿಮ್ ಕೇಂದ್ರ ನಿರ್ಮಾಣಕ್ಕೆ ಅನುದಾನ ನೀಡುವಂತೆ ಜಿಲ್ಲಾ ಅಥ್ಲೆಟಿಕ್ ಸಂಸ್ಥೆ ಕೂಡಾ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಎಲ್ಲ ಮನವಿಯನ್ನು ಪುರಸ್ಕರಿಸಿದ ಕೇಂದ್ರ ಸರ್ಕಾರ ಹಿಂದುಳಿದ ಭಾಗದ ಕ್ರೀಡಾಳುಗಳ ಅನುಕೂಲಕ್ಕೆ ಅನುದಾನ ಬಿಡುಗಡೆ ಮಾಡಿದ್ದು, ಕಾಮಗಾರಿಯೊಂದೇ ಬಾಕಿ ಉಳಿದಿದೆ.
ಹಲವು ಮೂಲಸೌಕರ್ಯಗಳ ಕೊರತೆಯಿಂದ ನರಳುತ್ತಿರುವ ಈ ಕ್ರೀಡಾಂಗಣಕ್ಕೆ ಕೇಂದ್ರ ಸರಕಾರ ಈಗ 4.5 ಅನುದಾನ ನೀಡಿದ್ದು, ಅದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಕ್ರೀಡಾಪಟುಗಳನ್ನು ತಯಾರಿಸಬೇಕು ಎಂಬುವುದೇ ಇಲ್ಲಿನ ಕ್ರೀಡಾಪ್ರೇಮಿಗಳ ಆಶಯವಾಗಿದೆ.
ನಂತರ ಸಂಸದ ಸಂಗಣ್ಣ ಕರಡಿ ಪತ್ರಿಕೆಯೊಂದಿಗೆ ಮಾತನಾಡಿ, ಕೊಪ್ಪಳ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗಾಗಿ ಕೇಂದ್ರ ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಲಾಗಿತ್ತು. ಆದರೆ ಪ್ರಸ್ತಾವಣೆಗೆ ಪುರಸ್ಕರಿಸಿ ಈಗ ಕೊಪ್ಪಳ ಜಿಲ್ಲಾ ಕ್ರೀಡಾಂಗಣಕ್ಕೆ 4.5 ಸೇರಿ ರಾಜ್ಯದ ಚಿಕ್ಕಮಗಳುರು, ಕಾರ್ಕಳ, ನಾಲ್ಕು ಕಡೆ 19.50 ಕೋಟಿ ರೂ. ಬೀಡುಗಡೆ ಮಾಡಿದೆ. ಈಗ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಪಡಿಸಿ ಕ್ರೀಡಾಳುಗಳ ಉತ್ತೇಜಿಸಲಾಗುತ್ತದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss