Saturday, August 13, 2022

Latest Posts

ಕೊಪ್ಪಳ: ಹನುಮಂತನ ಜನ್ಮಸ್ಥಳ ಅಂಜನಾದ್ರಿಯಲ್ಲಿ ಸಂಭ್ರಮಾಚರಣೆ..ವಿಶೇಷ ಪೂಜೆ..

ಕೊಪ್ಪಳ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದ ಹಿನ್ನಲೆಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿಯ ಹನುಮಂತನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿ ಸಂಭ್ರಮ ಕಳೆಗಟ್ಟಿದ್ದು ವಿಶೇಷ ಪೂಜೆಗಳು ನಡೆದಿವೆ.
ಕಳೆದ ಮೂರು ತಿಂಗಳಿಂದ ಲಾಕ್ ಡೌನ್ ಹಿನ್ನಲೆಯಲ್ಲಿ ಅಂಜನಾದ್ರ ಬೆಟ್ಟದ ಮೇಲೆ ಇರುವ ಹನುಮಂತನ ದರ್ಶನ ನಿಷೇಧಿಸಲಾಗಿತ್ತು. ಆದರೆ ಈಗ ಜಿಲ್ಲಾಡಳಿತ ದರ್ಶನಕ್ಕೆ ಅವಕಾಶ ನೀಡಿದ್ದರಿಂದ ಭಕ್ತರ ದಂಡು ಆಗಮಿಸಿದೆ. ಆದರೆ ಜಿಲ್ಲಾಡಳಿತ ಮುಂದಾಳತ್ವದಲ್ಲಿ ಕೊವಿಡ್ ನಿಯಮಗಳನುಸಾರವಾಗಿ ಸಾಮಾಜಿಕ ಅಂತರದಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಇದರಿಂದ ಅಂಜನಾದ್ರಿ ಬೆಟ್ಟದ ತುಂಬೆಲ್ಲಾ ಕೇಸರಿ ಧ್ವಜದೊಂದಿಗೆ ಸಿಂಗಾರಗೊಂಡು ಕೇಸರಿಮಯವಾಗಿ ಮಾರ್ಪಟ್ಟಿದೆ. ಅದಲ್ಲದೆ ಬೆಳಗ್ಗೆಯಿಂದ ಹನಮಂತನಿಗೆ ವಿಶೇಷ ಪೂಜೆಗಳು, ಹೋಮ ಹವನಗಳು ಕೂಡ ನಡೆದಿವೆ. ಸಂಭ್ರಮಾಚರಣೆಗೆ ಯಾವುದೇ ಪಟಾಕಿ ಸಿಡಿಸಲು ಅವಕಾಶ ಇಲ್ಲದ ಕಾರಣ ಯುವ ಬ್ರಿಗೇಡ್ ನೇತೃತ್ವದಲ್ಲಿ ಅಂಜನಾದ್ರಿ ಬೆಟ್ಟದ ಮೇಲೆ ಗಾಳಿಪಟ ಉತ್ಸವ ಕೂಡ ಆಚರಿಸುವ ಮೂಲಕ ಅಲ್ಲಿಗೆ ಆಗಮಿಸುವ ಭಕ್ತರ ಗಮನಸೆಳೆದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss