spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊಪ್ಪಳ| ಹಿಂದೂಪರ ಸಂಘಟನೆಗಳ ಕಾರ್ಯಕರ್ತರಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಮರ್ಪಣೆ !

- Advertisement -Nitte

ಕೊಪ್ಪಳ: ಭಾರತದ ಗಡಿ ಪ್ರದೇಶ ಲಡಾಕ್‍ನ ಗಲ್ವಾನ್ ಕಣಿವೆಯಲ್ಲಿ ಸೋಮವಾರ ಚೀನಾ ಸೈನಿಕರು ಭಾರತೀಯ ಯೋಧರ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬುಧವಾರ ನಗರದ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರಲ್ಲದೆ, ಘಟನೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಗೌರವ ಸಲ್ಲಿಸಿದರು.
ನಗರದ ಅಶೋಕ ವೃತ್ತದಲ್ಲಿ ಜಮಾಯಿಸಿದ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು ಚೀನಾ ವಿರುದ್ಧ ಹಾಗೂ ಭಾರತೀಯ ಯೋಧರಿಗೆ ಸ್ಥೈರ್ಯ ತುಂಬುವ ಘೋಷಣೆಗಳನ್ನು ಕೂಗಿ ಚೀನಾ ನಿರ್ಮಿತ ವಸ್ತುಗಳನ್ನು ಸುಡುವ ಮೂಲಕ ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಪ್ರತಿಭಟನಾಕಾರರನ್ನು ಉದ್ದೇಶಿಸಿ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಮುಖಂಡ ಗವಿ ಜಂತಕಲ್ ಮಾತನಾಡಿ, ಕೊರೋನಾ ಮಹಾಮಾರಿ ನಡುವೆಯಲ್ಲಿ ಚಿನಾ ತನ್ನ ಕುತಂತ್ರ ಬುದ್ದಿಯನ್ನು ತೋರಿಸಿದೆ. ಭಾರತ-ಚೀನಾ ಗಡಿಯಲ್ಲಿ ಏನೋ ನಡೆಯಲಿದೆ ಎಂಬ ಆತಂಕ ಹಲವು ದಿನಗಳಿಂದ ದೇಶವಾಸಿಗಳಲ್ಲಿ ಮನೆ ಮಾಡಿತ್ತು. ಅದಕ್ಕೆ ಇಂಬು ಕೊಡುವಂತೆ ಸೋಮವಾರ ಚೀನಾ ಸೈನಿಕರು ವಿನಾ ಕಾರಣ ಭಾರತೀಯ ಯೋಧರ ಮೇಲೆ ಏರಿ ಬಂದಿದ್ದು, ಸುಮಾರು 20ಕ್ಕೂ ಅಧಿಕ ಯೋಧರನ್ನು ಹತ್ಯೆಗೈದಿದ್ದಾರೆ. ಆದರೆ ಇದಕ್ಕೆ ಪ್ರತಿಕಾರವಾಗಿ ಭಾರತೀಯ ಯೋಧರೂ ಕೂಡ 40ಕ್ಕೂ ಅಧಿಕ ಸೈನಿಕರನ್ನು ಹೊಡೆದುರುಳಿಸಿದ್ದಾರೆ ಎಂದು ಹೇಳಿದರು.
ಚೀನಾ ಶಾಂತಿ ಮಾತುಕತೆಯ ನಡುವೆಯೇ ವಿನಾ ಕಾರಣ ಕಾಲುಕೆರೆದು ಜಗಳಕ್ಕೆ ನಿಲ್ಲುತ್ತಿದೆ. ಆದರೆ ಇಂದು ಭಾರತದ ಆಡಳಿತ ವ್ಯವಸ್ಥೆ 1962 ಹಾಗೂ 1975ರಂತಿಲ್ಲ. ಇಂದು ಭಾರತೀಯ ಸೇನೆಯ ಯೋಧರು ಸುಸಜ್ಜಿತ ಶಸ್ತ್ರಾಸ್ತ್ರಗಳೊಂದಿಗೆ ವಿರೋಧಿ ಪಡೆಯನ್ನು ಹೊಡೆದುರುಳಿಸಲು ಸನ್ನದ್ಧರಾಗಿದ್ದು, ಸೋಮವಾರದ ಘಟನೆ ಇದನ್ನು ಸಾಬೀತು ಮಾಡಿದೆ ಎಂದರು.
ಅದಲ್ಲದೆ ಚೀನಾಕ್ಕೆ ಪ್ರಬಲ ಆರ್ಥಿಕ ಮೂಲವಾದ ಚೀನಾ ವಸ್ತುಗಳನ್ನು ಭಾರತೀಯರು ಬಹಿಷ್ಕರಿಸುವ ಮೂಲಕ ತಕ್ಕ ಪ್ರತ್ಯುತ್ತರವನ್ನು ನೀಡಬೇಕಿದೆ ಎಂದು ಹೇಳಿದ ಅವರು, ದೇಶದಲ್ಲಿರುವ ಪಾಕಿಸ್ಥಾನಿ ಹಾಗೂ ಚೀನಾ ಹಸ್ತಕರು ಈ ದೇಶದಿಂದ ತೊಲಗುವವರೆಗೂ ನಮ್ಮ ಹೋರಾಟ ಮುಂದುವರಿಯಬೇಕು ಎಂದು ಅವರು ಹೇಳಿದರು.
ಪ್ರತಿಭಟನೆಯ ಬಳಿಕ ಚೀನಾ ವಿರುದ್ಧದ ಘೋಷಣೆಗಳೊಂದಿಗೆ ಘಟನೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಗೌರವಾರ್ಪಣೆ ಹಾಗೂ ಎರಡು ನಿಮಿಷಗಳ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭ ಸಂಘಟನೆಗಳ ಮುಖಂಡರಾದ ವೆಂಕಟೇಶ, ಬಾಬಣ್ಣ ಬಿಲ್ವಂಕರ, ಪ್ರಾಣೇಶ ಮಾದಿನೂರು, ರಾಖೇಶ ಪಾನಘಂಟಿ, ಆನಂದ ಆರ್ಶಿತ್, ಪ್ರವೀಣ ಇಟಗಿ, ದೀಪಕ, ಅಜಯ, ಪ್ರಶಾಂತ, ಪಂಪಣ್ಣ ಪಲ್ಲೆದ, ನಾಗರಾಜ, ಕಂದಗಲ್, ಮತ್ತಿತರರು ಭಾಗವಹಿಸಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss