ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಗೊರೆಬಿಹಾಳ ಗ್ರಾಮದಲ್ಲಿ ಹೆಸರು ಬೆಳೆ ಸೊಪ್ಪು ತಿಂದ ಪರಿಣಾಮ 15 ಕುರಿಗಳು ಬಲಿಯಾಗಿರುವ ಘಟನೆ ಜರುಗಿದೆ.
ಗೊರೆಬಿಹಾಳ ಗ್ರಾಮದ ರೈತ ಮುದಕಪ್ಪ ಮುದಿಯಪ್ಪನವರ ಅವರಿಗೆ ಸೇರಿದ 6 ಕುರಿ, ರಾಜಸಾಬ್ ಚಿತ್ತರಗಿ ಅವರಿಗೆ ಸೇರಿದ 4 ಹಾಗೂ ಚಂದ್ರಪ್ಪ ಮೇಣಸಗಿ ಅವರಿಗೆ ಸೇರಿದ 5 ಕುರಿಗಳು ಬಲಿಯಾಗಿವೆ. 1.5 ಲಕ್ಷ ರೂಪಾಯಿಗಳಿಗೂ ಅಧಿಕ ಪ್ರಮಾಣದ (ಬದಕುಗಳು) ಕುರಿಗಳು ಸಾವನ್ನಪ್ಪಿವೆ. ಹಾನಿ ಅನುಭವಿಸಿದ ರೈತರು ಪರಿಹಾರಕ್ಕಾಗಿ ಸರಕಾರವನ್ನು ಒತ್ತಾಯಿಸಿದ್ದಾರೆ. ಅತಿಯಾದ ಹೆಸರು ಸೋಪ್ಪು ಸೇವನೆ ವಿಷಕಾರಿ ಆಗಿ ಸಾವನ್ನಪ್ಪಿರುವ ಕುರಿತು ರೈತರು ಶಂಕೆ ವ್ಯಕ್ತಪಡಿಸಿದ್ದಾರೆ. ಕೆ.ಪಿ.ಸಿ.ಸಿ ಪರಿಶಿಷ್ಟ ವರ್ಗ ವಿಭಾಗದ ಪ್ರಧಾನ ಕಾರ್ಯದರ್ಶಿ ಮರಿಯಪ್ಪ ಗ್ವಾತಗಿ ಭೇಟಿ ನೀಡಿ, ರೈತರಿಗೆ ಸ್ವಾಂತನ ಹೇಳಿದ್ದಾರೆ.