Thursday, August 18, 2022

Latest Posts

ಕೊಪ್ಪಳ| 4 ಕೋ.ರೂ. ಸರಣಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗೆ ಶಾಸಕ ಹಿಟ್ನಾಳರಿಂದ ಭೂಮಿಪೂಜೆ

ಕೊಪ್ಪಳ: ಅಳವಂಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಾದ ನೀರಲಗಿ, ಮತ್ತೂರು, ಹನುಕುಂಟಿ, ಬೆಟಗೇರಿ, ಮೋರನಾಳ ಹಾಗೂ  ಬೈರಾಪುರ ಗ್ರಾಮದಲ್ಲಿ ಅಂದಾಜು ಮೊತ್ತ ರೂ. 4.00 ಕೋಟಿಯ ಸರಣಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ನೇರವೆರಿಸಿದರು.
ನಂತರ ಮಾತನಾಡಿ, ಸುಮಾರು 30 ವರ್ಷಗಳ ರೈತರ ಬೇಡಿಕೆಯಾದ ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯು ರೂ.88.00 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದು ಈ ಭಾಗದ ಸುಮಾರು ಐದರಿಂದ ಆರುಸಾವಿರ ಎಕರೆ ಒಣ ಬೇಸಾಯದ ಭೂಮಿಯು ನೀರಾವರಿಗೆ ಒಳಪಡಲಿದ್ದು ಶೀಘ್ರವೇ ಈ ಯೋಜನೆಯು ಮುಕ್ತಾಯ ಹಂತದಲ್ಲಿದ್ದು ಬರುವ ದಿನಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಿದರು.
ಸುಮಾರು 26ಕೀ.ಮಿ ಹಿರೇಹಳ್ಳವನ್ನು ಪೂಜ್ಯರ ನೇತೃತ್ವದಲ್ಲಿ ಸ್ವಚಗೊಳಿಸಿ ಸುಮಾರು ರೂ.67 ಕೋಟಿ ವೆಚ್ಚದಲ್ಲಿ ಹನ್ನೋಂದು ಬ್ರಿಜ್-ಕಂ-ಬ್ಯಾರೇಜ್‍ಗಳ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಾಗುತ್ತಿದೆ, ಇದರಿಂದ ಕ್ಷೇತ್ರದ ಬಹುತೇಕ ಗ್ರಾಮಗಳ ಅಂರ್ತಜಲ ಮಟ್ಟ ಹೆಚ್ಚಳವಾಗಿ ಕೃಷಿಗೆ ನೀರಿನ ಸೌಲಭ್ಯ ಒದಗಲಿದ್ದು ಅಳವಂಡಿ ಹಾಗೂ ಗೊಂಡಬಾಳ ಜಿ.ಪಂ ವ್ಯಾಪ್ತಿಯ 20,000 ಎಕರೆ ಭೂಮಿಯು ನೀರಾವರಿಗೆ ಒಳಪಡಲಿದೆ ಎಂದರು.
ತಾ.ಪಂ ಅಧ್ಯಕ್ಷ ಬಾಲಚಂದ್ರನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷ, ಕೆ.ಎಂ.ಎಪ್ ಮಾಜಿ ಅಧ್ಯಕ್ಷ ವೆಂಕನಗೌಡ್ರ ಹಿರೇಗೌಡ್ರ, ಎ.ಪಿ.ಎಮ್.ಸಿ ಅಧ್ಯಕ್ಷ ನಾಗರಾಜ ಚಳ್ಳೂಳ್ಳಿ, ನಗರಸಭಾ ಸದಸ್ಯ ಅಕ್ಬರ ಪಾಷ ಪಲ್ಟನ, ಮುಂಖಡರುಗಳಾದ ನವೋದಯ ವಿರುಪಣ್ಣ, ಮುಖಂಡ ಭರಮಪ್ಪ ನಗರ, ಕೃಷ್ಣರೆಡ್ಡಿ ಗಲಿಬಿ, ಹನುಮೇಶ ಹೊಸಳ್ಳಿ, ತೋಟಪ್ಪ ಸಿಂಟ್ರ, ವಕ್ತಾರ ರವಿ ಕುರಗೋಡ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!