Thursday, June 30, 2022

Latest Posts

ಕೊಪ್ಪಳ| kims ನಲ್ಲಿ ಕೊರೋನಾ ಸೋಂಕು ಪರೀಕ್ಷಾ ಹೊಸ ಯಂತ್ರ, ಸಾಮರ್ಥ್ಯ ಹೆಚ್ಚಳ

ಕೊಪ್ಪಳ: ವೈದ್ಯಕೀಯ ವಿಜ್ಣಾನ ಸಂಸ್ಥೆಯಲ್ಲಿ ಕೊರೋನಾ ಸೋಂಕಿತರ ಪರೀಕ್ಷೆಯ ಮತ್ತೊಂದು ಯಂತ್ರದಿಂದ ಕೊರೋನಾ ಪರೀಕ್ಷಾ ಸಾಮರ್ಥ್ಯ ಹೆಚ್ಚಾದ ಹಿನ್ನಲೆಯಲ್ಲಿ ಸೋಂಕಿತರ ಪ್ರಮಾಣ ಕೂಡ ಹೆಚ್ಚುತ್ತಾ ಸಾಗಿದೆ.
ಆರಂಭದಲ್ಲಿ ಪರೀಕ್ಷೆಯ ಸಾಮರ್ಥ್ಯ ೧೪೦ ರಿಂದ ೧೫೦ರವರೆ ಮಾತ್ರ ಇತ್ತು. ಇದಕ್ಜಾಗಿ ದಿನಾಲು ೫೦೦ ಜನರ ಗಂಟಲು ದ್ರವ ಮಾತ್ರ ಸಂಗ್ರಹಿಸಲಾಗುತ್ತಿತ್ತು. ಅದರ ಜೊತೆಗೆ ಬೆರೆ ಜಿಲ್ಲೆಗಳ ಮಾದರಿಗಳು ಇಲ್ಲೆಗೆ ಬರುವುದರಿಂದ ಪರೀಕ್ಷೆಯ ವಿಳಂಭವಾಗುತ್ತಾ ಸಾಗಿತ್ತು. ಇದರಿಂದ ದಿನಕ್ಕೆ ೧೦ ರಿಂದ ೧೫ ಪ್ರಕರಣಗಳು ದೃಢ ಪಡುತ್ತಿದ್ದವು. ಒಬ್ಬರ ವರದಿ ಬರಬೇಕು ಅಂದರೂ ಮೂರು ದಿನವಾದರೂ ಸಮಯ ತೆಗೆದುಕೊಳ್ಳುತ್ತಿತ್ತು.
ಆದರೆ ಈಗ ಜಿಲ್ಲಾಡಳಿತದಿಂದ ಪ್ರಯೋಗಾಲಯಕ್ಕೆ ಹೊಸದಾಗಿ ಮತ್ತೊಂದು ಯಂತ್ರ ಖರೀದಿಸಲಾಗಿದೆ. ಈಗಾಗಿ ಎರಡು ಯಂತ್ರಗಳ ಸಹಾಯದಿಂದಾಗಿ ದಿನಕ್ಕೆ ಸುಮಾರು ೭೦೦ ರವರೆಗೆ ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆ ನಡೆಸಲು ಸಾಧ್ಯವಾಗಲಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಕೂಡ ಹೆಚ್ಚುತ್ತಾ ಸಾಗಿದೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.
ಆದರೆ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ್ ಕಿಶೋರ್ ಅವರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನಾಕ್ಕೆ ಭಯ ಪಡುವುದು ಬೇಡ. ಪ್ರಯೋಗಾಲಯದಲ್ಲಿ ಪರೀಕ್ಷಿಸುವ ಹೊಸ ಮಾದರಿ ಯಂತ್ರವನ್ನು ತರಲಾಗಿದೆ. ಈಗಾಗಿ ಪರೀಕ್ಷೆಯ ಪ್ರಮಾಣ ಹೆಚ್ಚಾದ ಕಾರಣ ಸೋಂಕಿತರ ಪ್ರಮಾಣ ಕೂಡ ಹೆಚ್ವುತ್ತಾ ಸಾಗಿದೆ. ಬೆರೆ ಜಿಲ್ಲೆಗೆ ಹೋಲಿಸಿದರೆ ಸೋಂಕಿನ ಪ್ರಮಾಣ ಜಿಲ್ಲೆಯಲ್ಲಿ ಶೇ.೫ ರಷ್ಡು ಇದೆ. ಭಯ ಪಡುವುದು ಬೇಡ ಜಿಲ್ಲಾಡಳಿತ ಎಲ್ಲಾ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ ಇದಕ್ಜೆ ಸಹಕರಿಸಬೇಕು ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss