Wednesday, August 10, 2022

Latest Posts

ಕೊರಟಗೆರೆ ಪಟ್ಟಣದಲ್ಲಿ ಅಡುಗೆ ತಯಾರಕರು, ಸಹಾಯಕರಿಗೆ ದವಸ ಧಾನ್ಯದ ಕಿಟ್‍ ವಿತರಣೆ

ತುಮಕೂರು: ಇಂದು ಕೊರಟಗೆರೆ ಪಟ್ಟಣದ ಗುರುಭವನದಲ್ಲಿ ತಾಲ್ಲೂಕಿನ ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ವಿಭಾಗದ 500 ಮಂದಿ ಅಡುಗೆ ತಯಾರಕರು ಮತ್ತು ಸಹಾಯಕರುಗಳಿಗೆ ದವಸ ಧಾನ್ಯದ ಕಿಟ್‍ನ್ನು ಪಾವಗಡದ ರಾಮಕೃಷ್ಣ ಆಶ್ರಮ
ಮತ್ತು ಇನ್ಫೋಸಿಸ್ ಫೌಂಡೇಶನ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನ ಹಳ್ಳಿಯ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ವಿತರಿಸಲಾಯಿತು.
ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮಿ ಜಪಾನಂದಜೀ ರವರು ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದರು.
ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರಾದ ರೇವಣ ಸಿದ್ದಪ್ಪ , ಕೊರಟಗೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಶಿವಪ್ರಕಾಶ್.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎನ್.ಎಸ್.ಸುಧಾಕರ್, ಬಿ.ಆರ್.ಸಿ. ಸುರೇಂದ್ರನಾಥ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ರಘು, ರಕ್ತದಾನಿ ಶಿಕ್ಷಕರ ಸ್ನೇಹ ಬಳಗದ ವೆಂಕಟೇಶಯ್ಯ, ಶಶಿಕುಮಾರ್ ಮತ್ತಿತರ ಶಿಕ್ಷಣ ಕ್ಷೇತ್ರದ ಅಧಿಕಾರಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಪಾನಂದ ಸ್ವಾಮೀಜಿಯವರು ಪಾವಗಡ ತಾಲ್ಲೂಕಿನ 600 ಮಂದಿ, ಮಧುಗಿರಿ ತಾಲ್ಲೂಕಿನ 712 ಮಂದಿ ಅಕ್ಷರ ದಾಸೋಹ ಸಿಬ್ಬಂದಿಯವರಿಗೆ ದವಸ ಧಾನ್ಯದ ಕಿಟ್‍ಗಳನ್ನು ವಿತರಿಸಿದ್ದನ್ನು ಸ್ಮರಿಸಿದರು ಮತ್ತು ಕಳೆದ ಮಾರ್ಚ್ ತಿಂಗಳಿನಿಂದ ಕೋವಿಡ್-19 ನಿಯಂತ್ರಣಕ್ಕಾಗಿ ಅವಿರತವಾಗಿ ಶ್ರಮಿಸುತ್ತಿರುವುದನ್ನು ಮತ್ತು ಸಮಾಜದ ದುರ್ಬಲ ಹಾಗೂ ದೀನ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಸೇವಾಶ್ರಮದ ವತಿಯಿಂದ ದವಸ ಧಾನ್ಯದ ಕಿಟ್‍ಗಳನ್ನು ವಿತರಿಸಿರುವುದಾಗಿ ತಿಳಿಸಿದರು. ಇದುವರೆಗೆ ಸುಮಾರು 20000ಕ್ಕೂ ಅಧಿಕ ಮಂದಿ ಇಂತಹ ಪ್ರಯೋಜನವನ್ನು ಪಡೆದಿರುವುದಾಗಿ ತಿಳಿಸಿದರು. ಸದರಿ ಕಾರ್ಯಕ್ರಮದ ಪ್ರಾಯೋಜಕರಾದ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‍ನ ಅಧಿಕಾರಿಗಳಿಗೆ ಮತ್ತು ಟ್ರಸ್ಟೀಗಳಿಗೆ ಹೃತ್ಪೂರ್ವಕವಾಗಿ ಅಭಿನಂದಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿ.ಡಿ.ಪಿ.ಐ. ರೇವಣಸಿದ್ದಪ್ಪ ರವರು ಸ್ವಾಮಿ ಜಪಾನಂದಜೀ ರವರು ಶಿಕ್ಷಣ ಇಲಾಖೆಗೆ ಅತ್ಯಂತ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾದುದು.
ಕೊರೊನಾ ಸೋಂಕಿತರ ಹಾಗೂ ಅವರ ಕುಟುಂಬ ವರ್ಗದವರಿಗೆ ಶಕ್ತಿವರ್ಧಕ ಪಾನೀಯಗಳನ್ನು ಕೊರಟಗೆರೆ ತಾಲ್ಲೂಕು, ಮಧುಗಿರಿ ತಾಲ್ಲೂಕು ಹಾಗೂ ಪಾವಗಡ ತಾಲ್ಲೂಕಿಗೆ ವಿತರಣೆ ಮಾಡುವಂತಹ ಯೋಜನೆಯನ್ನು ಉದ್ಘಾಟಿಸಿದರು. ಕೊರಟಗೆರೆ ತಾಲ್ಲೂಕಿಗೆ 35000 ಪಾನೀಯ ಪೌಚುಗಳು (5 ಟನ್), ಮಧುಗಿರಿ ಟನ್ 35000 ಪಾನೀಯ ಪೌಚುಗಳು (5 ಟನ್) ಹಾಗೂ ಪಾವಗಡ ತಾಲ್ಲೂಕಿಗೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಸುಮಾರು ಒಂದು ಲಕ್ಷಕ್ಕೂ ಮಿಗಿಲಾದ ಪಾನೀಯಗಳ ಪೌಚುಗಳನ್ನು ವಿತರಿಸುವ ಕಾರ್ಯಕ್ರಮ ಉದ್ಘಾಟನೆಯಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss