ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರ ಮೂವರಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಇದೇ ವೇಳೆ ನಾಲ್ಕು ಮಂದಿ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖ ರಾಗಿದ್ದಾರೆ. ಸೋಂಕಿತರು ಚೆಂಗಳ ನಿವಾಸಿಯಾದ 48, 20 ಮತ್ತು ಮೊಗ್ರಾಲ್ಪುತ್ತೂರಿನ 43 ವರ್ಷ ಪ್ರಾಯದ ವ್ಯಕ್ತಿಗಳಾಗಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 4619 ಮಂದಿ ನಿಗಾದಲ್ಲಿದ್ದು, ಈ ಪೈಕಿ 4567 ಮಂದಿ ಮನೆಗಳಲ್ಲೂ, 52 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. 3256 ಸ್ಯಾಂಪಲ್ಗಳ ಪೈಕಿ 2575 ಸ್ಯಾಂಪಲ್ ನೆಗೆಟಿವ್. 392 ಸ್ಯಾಂಪಲ್ ವರದಿ ಲಭಿಸಲು ಬಾಕಿಯಿದೆ. ಮಂಗಳವಾರ ಹೊಸದಾಗಿ 7 ಮಂದಿಯನ್ನು ಐಸೋಲೇಷನ್ ವಾರ್ಡ್ಗೆ ದಾಖಲಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ 172 ಮಂದಿಗೆ ಸೋಂಕು ಬಾ„ಸಿದ್ದು, 146 ಮಂದಿ ಗುಣಮುಖರಾಗಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ 26 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೇರಳ ರಾಜ್ಯದಲ್ಲಿ ಮಂಗಳವಾರ ಒಟ್ಟು 19 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಈ ಪೈಕಿ ಕಣ್ಣೂರು ಜಿಲ್ಲೆಯಲ್ಲಿ 10 ಮಂದಿಗೆ, ಪಾಲ್ಘಾಟ್-4, ಕಾಸರಗೋಡು-3, ಮಲಪ್ಪುರ ಮತ್ತು ಕೊಲ್ಲಂ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಕೊರೊನಾ ವೈರಸ್ ಸೋಂಕು ಬಾ„ಸಿದೆ. ರಾಜ್ಯದಲ್ಲಿ ಒಟ್ಟು 16 ಮಂದಿ ಗುಣಮುಖರಾಗಿದ್ದಾರೆ. ಕಣ್ಣೂರಿನಲ್ಲಿ 9 ಮಂದಿ ವಿದೇಶದಿಂದ ಬಂದವರು ಹಾಗು ಒಬ್ಬರಿಗೆ ಸಂಪರ್ಕದಿಂದ ಸೋಂಕು ಬಾ„ಸಿದೆ. ಪಾಲ್ಘಾಟ್, ಮಲಪ್ಪುರಂ ಮತ್ತು ಕೊಲ್ಲಂ ಜಿಲ್ಲೆಯಲ್ಲಿ ತಲಾ ಒಬ್ಬರು ತಮಿಳುನಾಡಿನಿಂದ ಬಂದವರು. ಕಾಸರಗೋಡು ಜಿಲ್ಲೆಯ ಮೂವರು ವಿದೇಶದಿಂದ ಬಂದವರು.
ಕೇರಳದಲ್ಲಿ ಈ ವರೆಗೆ ಒಟ್ಟು ಸೋಂಕು ಬಾ„ತರ ಸಂಖ್ಯೆ 426. ಇದೀಗ ವಿವಿಧ ಆಸ್ಪತ್ರೆಗಳಲ್ಲಿ 117 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 36667 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 36335 ಮಂದಿ ಮನೆಗಳಲ್ಲೂ, 332 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಮಂಗಳವಾರ 102 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ತನಕ 20,252 ಸ್ಯಾಂಪಲ್ಗಳನ್ನು ಪರೀಕ್ಷೆ ಮಾಡಲಾಗಿದೆ. ಲಭ್ಯ 19442 ಮಂದಿ ಸ್ಯಾಂಪಲ್ ನೆಗೆಟಿವ್ ಫಲಿತಾಂಶ ಬಂದಿದೆ.
ಮಂಗಳವಾರ ಗುಣಮುಖರಾದವರಲ್ಲಿ ಕಣ್ಣೂರು ಜಿಲ್ಲೆಯಲ್ಲಿ 7 ಮಂದಿ, ಕಾಸರಗೋಡು-4, ಕಲ್ಲಿಕೋಟೆ-4, ತಿರುವನಂತಪುರ-1 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಅತ್ಯಂತ ಹೆಚ್ಚು ಕೊರೊನಾ ವೈರಸ್ ಸೋಂಕಿತರು ಕಣ್ಣೂರು ಜಿಲ್ಲೆಯಲ್ಲಿದ್ದಾರೆ. ಒಟ್ಟು 104 ಮಂದಿಗೆ ಕೊರೊನಾ ವೈರಸ್ ಸೋಂಕು ಹರಡಿದ್ದು, ಒಂದು ಮನೆಯ 10 ಮಂದಿಗೆ ಸಂಪರ್ಕದ ಮೂಲಕ ಸೋಂಕು ಬಾ„ಸಿದೆ. ಈ ಹಿನ್ನೆಲೆಯಲ್ಲಿ ಕಣ್ಣೂರು ಜಿಲ್ಲೆಯ ಇನ್ನಷ್ಟು ತಪಾಸಣೆ ಬಿಗಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.