ಕಾಸರಗೋಡು: ಕೊರೊನಾ ವೈರಸ್ ಸೋಂಕಿನಿಂದ ವರ್ಕಾಡಿ ಧರ್ಮನಗರದ ಮಜೀರ್ಪಳ್ಳದ ನಿವಾಸಿ ದಿ.ಇಬ್ರಾಹಿಂ ಅವರ ಪುತ್ರ ಅಬ್ದುಲ್ ಹಮೀದ್(38) ಅವರು ದುಬೈಯ ಆಸ್ಪತ್ರೆಯಲ್ಲಿ ಸಾವಿಗೀಡಾದರು.
20 ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಯಾಂಪಲ್ ಪರೀಕ್ಷೆಯಲ್ಲಿ ಅವರಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿತ್ತು. ಒಂದು ವಾರದ ಹಿಂದೆ ಅವರ ಪರಿಸ್ಥಿತಿ ಗಂಭೀರ ಸ್ಥಿತಿಗೆ ತಲುಪಿತ್ತು. ದುಬೈಯಲ್ಲಿ ಚಾಲಕರಾಗಿ ದುಡಿಯುತ್ತಿದ್ದ ಅಶರು 8 ತಿಂಗಳ ಹಿಂದೆ ಊರಿಗೆ ಬಂದು ವಾಪಸಾಗಿದ್ದರು. ಸೋಮವಾರ ಕೇರಳದ ಒಟ್ಟಪ್ಪಾಲಂ ಮುಳಂಞೂರು ನೆಲ್ಲಿಕುರಿಶಿ ನಿವಾಸಿ ಕಬೀರ್(47) ಮತ್ತು ಪತ್ತನಂತಿಟ್ಟ ತುಂಬುಮನ್ ನಿವಾಸಿ ಕೋಶಿ ಸಕರಿಯಾ (51) ಕೊರೊನಾ ಸೋಂಕಿನಿಂದ ಸಾವಿಗೀಡಾಗಿದ್ದರು. ಈ ವರೆಗೆ ದುಬೈಯಲ್ಲಿ ಆರು ಮಂದಿ ಸಹಿತ ಕೊಲ್ಲಿ ರಾಷ್ಟ್ರದಲ್ಲಿ ಕೇರಳದ ಒಟ್ಟು 14 ಮಂದಿ ಸಾವಿಗೀಡಾಗಿದ್ದಾರೆ. ಹಲವು ಮಂದಿ ಕೊಲ್ಲಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.