ಕೊರೋನಾಕ್ಕೆ ಬೆದರಿದ ಶಾಲೆಗಳು: ಪರೀಕ್ಷೆ ಇಲ್ಲದೆ ವಿದ್ಯಾರ್ಥಿಗಳು ಪಾಸ್

0
138

ಮೈಸೂರು: ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮೈಸೂರಿನ ಸಿ.ಬಿ.ಎಸ್.ಸಿ ಪಠ್ಯ ಕ್ರಮದ ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ಪಾಸ್ ಮಾಡಲು ನಿರ್ಧರಿಸಲಾಗಿದೆ.

ಎಲ್ ಕೆ ಜಿ, ಯುಕೆಜಿ ಮತ್ತು ಒಂದರಿಂದ ನಾಲ್ಕನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಪಾಸ್ ಮಾಡಲು ಹಾಗೂ 9ನೇ ತರಗತಿಯೊಳಗಿನ ಮಕ್ಕಳಿಗೆ ಪ್ರಿಪರೇಟರಿಯೇ ಅಂತಿಮ ಪರೀಕ್ಷೆಯನ್ನಾಗಿಸಲು ಸಿ.ಬಿ.ಎಸ್.ಸಿ ಶಾಲೆಗಳ ಒಕ್ಕೂಟ ಯೋಚಿಸಿದೆ. ಮೈಸೂರು, ಮಂಡ್ಯ, ಹಾಸನ ಹಾಗೂ ಕೊಡಗು ಜಿಲ್ಲೆಗಳ ಖಾಸಗಿ ಸಿ.ಬಿ.ಎಸ್.ಸಿ ಶಾಲೆಗಳ ಒಕ್ಕೂಟ ಈ ನಿರ್ಧಾರ ಕೈಗೊಂಡಿದೆ. ಇದಕ್ಕೆ 5 ಜಿಲ್ಲೆಗಳ 240 ಸಿ.ಬಿ.ಎಸ್.ಸಿ ಶಾಲೆಗಳು ಒಪ್ಪಿಗೆ ಸೂಚಿಸಿವೆ.

ಮಾ.20ರೊಳಗಾಗಿ ಎಲ್ಲ ಸಿ.ಬಿ.ಎಸ್.ಸಿ ಶಾಲೆಗಳಲ್ಲಿ ಕಡ್ಡಾಯವಾಗಿ ರಜೆ ಘೋಷಿಸಬೇಕೆಂದು ತೀರ್ಮಾನಿಸಲಾಗಿದೆ ಎಂದು ಸಿ.ಬಿ.ಎಸ್.ಸಿ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಸುಧಾಕರ್ ಶೆಟ್ಟಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here