Thursday, June 30, 2022

Latest Posts

ಕೊರೋನಾಗೆ ಒಂದೇ ವಾರದಲ್ಲಿ ಎಂಟು ಬಲಿ: ಸಾವಿನ ಸಂಖ್ಯೆಯಿಂದ ಭಯಗೊಂಡ ಕೋಟೆನಾಡಿನ ಜನ

ಜಗದೀಶ ಎಂ.ಗಾಣಿಗೇರ
ಬಾಗಲಕೋಟೆ:
ಕಳೆದೊಂದು ವಾರದಲ್ಲಿ ಕಿಲ್ಲರ್ ಕೊರೋನಾ ಜಿಲ್ಲೆಯಲ್ಲಿ ಎಂಟು ಮಂದಿಯನ್ನು ಬಲಿಪಡೆದುಕೊಂಡ ಸುದ್ದಿಯನ್ನು ಕೇಳುತ್ತಿರುವ ಕೋಟೆನಾಡಿನ ಜಿಲ್ಲೆಯ ಜನರಿಗೆ ಮಾತ್ರ ಅಕ್ಷರಶಹ ಭಯದ ವಾತಾವರಣ ಮಾತ್ರ ಸೃಷ್ಟಿಯಾಗಿದೆ.ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಒಂದು ಕಡೆಯಾದರೆ ಇದುವರೆ 12 ಜನರು ಈ ಸೋಂಕಿನಿಂದ ಮೃತಪಟ್ಟಿರುವುದು ಜಿಲ್ಲಾಡಳಿತಕ್ಕೆ ಮತ್ತು ಜನರಿಗೆ ಚಿಂತೆಗೀಡು ಮಾಡಿದ್ದಂತು ಅಲ್ಲಗಳೆಯುವಂತಿಲ್ಲ.
ಸಾರಿ,ಐಎಲ್ಐ ಪ್ರಕರಣಗಳಲ್ಲಿ ಹೆಚ್ಚು ಸೊಂಕು ಕಾಣಿಸಿಕೊಳ್ಳುತ್ತಿರುವುದರಿಂದ ಇದರಿಂದಲೇ ಸಾವಿನ ಸಂಖ್ಯೆ ಹೆಚ್ಚಾಗಿದೆ. ಜುಲೈ ತಿಂಗಳ ಎರಡನೇ ವಾರದಲ್ಲೇ ಕೊರೋನಾ ಅಟ್ಟಹಾಸಕ್ಕೆ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಬಾಗಲಕೋಟೆ ತಾಲ್ಲೂಕಿನ ಮನಹಳ್ಳಿ ಗ್ರಾಮದ 80 ವರ್ಷದ ವೃದ್ಧ, ಹಾನಾಪೂರ ಎಲ್.ಟಿಯ 30 ವರ್ಷದ ವ್ಯಕ್ತಿ, ಬನಹಟ್ಟಿಯ 65 ವರ್ಷದ ವೃದ್ಧ, 78 ವರ್ಷದ ಜೆಎಂಎಫ್ಸಿ ನ್ಯಾಯಾಧೀಶರ ತಾಯಿ, 47 ವರ್ಷದ ತೋಟಗಾರಿಕೆ ವಿವಿ ಆವರಣದಲ್ಲಿ ಕೆಲಸ ಮಾಡುವ ದಿನಗೂಲಿ ನೌಕರ,ಖಜ್ಜಿಡೋಣಿ ಗ್ರಾಮದ 45 ವರ್ಷದ ಮಹಿಳೆ , ಕಲಾದಗಿ ಗ್ರಾಮದ 44 ವರ್ಷದ ವ್ಯಕ್ತಿ, 74 ವರ್ಷದ ಬಾಗಲಕೋಟೆ ನವನಗರದ ವೃದ್ಧ ಹಾಗೂ ಮುಧೋಳದಲ್ಲಿ ಕೊರೋನಾ ಶಂಕಿತ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ 13 ಜನರು ಕೊರೋನಾ ಸೋಂಕಿಗೆ ಉಸಿರು ಚೆಲ್ಲಿದ್ದಾರೆ.
ಕೆಲವೊಂದು ಸಾವನ್ನಪ್ಪಿದವರ ಟ್ರಾವೆಲ್ ಹಿಸ್ಟರಿ ಸಹ ಸಿಗುತ್ತಿಲ್ಲ. ಜಿಲ್ಲೆಯಲ್ಲಿ ಸಂಚಾರ ಮಾಡಿದವರು ಕೆಲವರು ಅಂತರ ಜಿಲ್ಲಾ ಪ್ರವಾಸ ಕೈಗೊಂಡುವರಿದ್ದಾರೆ. ಸಾರಿ,ಐಎಲ್ಐ ಪ್ರಕರಣಗಳಡಿ  ದಾಖಲಾದವರೇ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಜಿಲ್ಲೆಯಲ್ಲಿ 400 ಗಡಿಯ ಅಂಚಿನಲ್ಲಿರುವ ಕೊರೋನಾ ಪೀಡಿತರ ಸಂಖ್ಯೆಯಲ್ಲಿ 199 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 180ಕ್ಕೂ ಹೆಚ್ಚು ಜನ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 2000ಕ್ಕೂ ಹೆಚ್ಚು ವರದಿಗಳು ಬರಬೇಕಾಗಿರುವುದರಿಂದ ಇದರಲ್ಲಿ ಎಷ್ಟು ಸೋಂಕಿತರ ಕಾಣಿಸಿಕೊಳ್ಳುತ್ತಾರೆ ಎಂಬ ಆತಂಕ ಜಿಲ್ಲೆಯಲ್ಲಿ ಕಾಡುತ್ತಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಆಗಾಗ ಮಳೆ ಸುರಿಯುತ್ತಿರುವುದು ಸಹ ಸೋಂಕು ಹೆಚ್ಚಾಗಲು ಕಾರಣವಾಗುತ್ತಿದೆ.
ಜ್ವರ, ಕೆಮ್ಮು, ಸೀತ, ನೆಗಡಿ, ಉಸಿರಾಟದ ತೊಂದರೆ, ಮೈ-ಕೈ ನೋವು ಇದ್ದವರು ಮನೆಯಲ್ಲಿಯೇ ಅಥವಾ ಆರ್.ಎಂ.ಪಿ ವೈದ್ಯರಲ್ಲಿ ಚಿಕಿತ್ಸೆ ಪಡೆಯದೇ ತಕ್ಷಣ ಸಕರ್ಾರಿ ಆಸ್ಪತ್ರೆಗಳಿಗೆ ತರೆಳಿ ಚಿಕಿತ್ಸೆ ಪಡೆಯಬೇಕು. ಈ ತರಹದ ಲಕ್ಷಣಗಳಿರುವವರು ತಡವಾಗಿ ಆಸ್ಪತ್ರೆಗೆ ಬರುವುದರಿಂದ ಕೋವಿಡ್-19 ರೋಗವು ಇದ್ದವರಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದಾಗಿಯೂ ಫಲಕಾರಿಯಾಗದೇ ರೋಗಿಗಳ ಪರಿಸ್ಥಿತಿ ಗಂಭೀರವಾಗುವ ಹೆಚ್ಚಿನ ಸಾಧ್ಯತೆ ಇರುದರಿಂದ ಆದಷ್ಟು ಬೇಗ ಲಕ್ಷಣಗಳು ಕಂಡುಬಂದಲ್ಲಿ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು.
ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾಧಿಕಾರಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss