Monday, August 8, 2022

Latest Posts

ಕೊರೋನಾಗೆ ಪುದುಚೇರಿಯ ಮಾಜಿ ಶಾಸಕ ವಿ. ಭಾಲನ್ ಬಲಿ

ಪುದುಚೆರಿ:  ಪುದುಚೇರಿಯ ಮಾಜಿ ಶಾಸಕ ಮತ್ತು ಎನ್ ಆರ್ ಕಾಂಗ್ರೆಸ್ ಮುಖಂಡ ವಿ ಭಾಲನ್ ಕೊರೋನಾಗೆ ಬಲಿಯಾಗಿದ್ದಾರೆ.
ಭಾಲನ್ ಮಂಗಳವಾರ ಸಾವನ್ನಪ್ಪಿದ್ದು ಪತ್ನಿ ಮತ್ತು ಪುತ್ರರನ್ನು ಅಗಲಿದ್ದಾರೆ. ಕಾಮರಾಜ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಾಲನ್ ಅವರಿಗೆ ಕೊರೋನಾ ಸೋಂಕು ತಗುಲಿತ್ತು. ನಂತರ ಅವರನ್ನು ಶ್ರೀ ಮನಕುಲ ವಿನಯನಗರ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಐದು ದಿನಗಳಿಂದ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss