Tuesday, July 5, 2022

Latest Posts

ಕೊರೋನಾಗೆ ಶೀಘ್ರವೇ ಲಸಿಕೆ: ಅಮೆರಿಕ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಮಹಾಮಾರಿ ಕೊರೋನಾ ಸೋಂಕು ನಿವಾರಣೆಗೆ ಶೀಘ್ರವೇ ಲಸಿಕೆ ಲಭ್ಯವಾಗಲಿದೆ ಎಂದು ಅಮೆರಿಕ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಳಿವು ನೀಡಿದ್ದಾರೆ.

ದೇಶದ ವೈದ್ಯವೃಂದ ಹಾಗೂ ಸಂಶೋಧಕರು ಈ ದಿಶೆಯಲ್ಲಿ ಶ್ರಮ ವಹಿಸಿದ್ದು, ಲಸಿಕೆ ಶೀಘ್ರವೇ ಎಲ್ಲರಿಗೂ ಲಭ್ಯವಾಗಲಿದೆ. ಇದರ ಪೂರ್ವಭಾವಿ ಪರೀಕ್ಷೆ ಪೂರ್ಣವಾಗಬೇಕಿದೆ. ಒಟ್ಟಿನಲ್ಲಿ ಮಹಾಮಾರಿ ಕೊರೋನಾ ಸೋಂಕನ್ನು ನಿವಾರಿಸುವ ಲಸಿಕೆಯನ್ನು ಮಾತ್ರ ಅಮೆರಿಕ ಯಶಸ್ವಿಪೂರ್ವಕವಾಗಿ ಕಂಡು ಹಿಡಿಯಲಿದೆ ಎಂದು ಟ್ರಂಪ್ ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಕಿಮ್ ಅನಾರೋಗ್ಯ ಸುದ್ದಿ ಅಲ್ಲಗೆಳೆದ ಟ್ರಂಪ್: ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಆರೋಗ್ಯದ ಬಗ್ಗೆ ತಲೆ ಎತ್ತಿರುವ ಸುದ್ದಿಗಳಲ್ಲಿ ಹುರಳಿಲ್ಲ. ಇದು ಯಾವುದೂ ನಿಜವಲ್ಲ ಎಂದೂ ಅವರು ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss