ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊರೋನಾಗೆ ಸಹೋದರಿ ನಿಧನ: ದಯವಿಟ್ಟು ಜಾಗರೂಕರಾಗಿರಿ ಎಂದ ಬೆಲ್​ ಬಾಟಂ ಸಿನಿಮಾ ನಿರ್ದೇಶಕ ಜಯತೀರ್ಥ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಸೋಂಕಿಗೆ ಅನೇಕ ಸೆಲೆಬ್ರಿಟಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಸೆಲೆಬ್ರಿಟಿಗಳ ಕುಟುಂಬದವರು ಕೂಡ ನಿಧನ ಹೊಂದುತ್ತಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಜಯತೀರ್ಥ ಕೂಡ ಸಹೋದರಿಯನ್ನು ಕಳೆದುಕೊಂಡು ಮರುಗುತ್ತಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ.
‘ಕ್ಷಮಿಸಿ ಅಕ್ಕ. ನನ್ನ ಪ್ರಯತ್ನಗಳಾಚೆಗೂ ನಿಮ್ಮನ್ನು ಉಳಿಸಿಕೊಳ್ಳಲು ಆಗಲಿಲ್ಲ. ಪರಮಮುಗ್ಧರಾದ ನನ್ನಕ್ಕ ಮನು ಮೋಹನಾಂಬ (58). ಇವರನ್ನು ಕೊರೋನಾ ಸೋಂಕಿನಿಂದಾಗಿ ಕಳೆದುಕೊಂಡಿದ್ದೇನೆ. ನನಗೆ ಸಾಧ್ಯವಾದಲ್ಲೆಲ್ಲ ರಾತ್ರಿ-ಹಗಲು ಓಡಾಡಿ ಆಕ್ಸಿಜನ್​, ಬೆಡ್​ಗಾಗಿ ಪರದಾಡಿ ಕೊನೆಗೆ ವಿಕ್ಟೋರಿಯಾದಲ್ಲಿ ಬೆಡ್​ ಸಿಗುವಷ್ಟರಲ್ಲಿ ಅವರ ದೇಹ ಚಿಕಿತ್ಸೆಗೆ ಸ್ಪಂದಿಸುವ ಚೈತನ್ಯ ಕಳೆದುಕೊಂಡಿತ್ತು’ ಎಂದು ನೋವಿನಿಂದ ಪೋಸ್ಟ್​ ಮಾಡಿದ್ದಾರೆ ಜಯತೀರ್ಥ.
‘ಈ ಪರದಾಟ, ಆತಂಕ, ಟೆನ್ಷನ್​ ಯಾರಿಗೂ ಬೇಡ. ದಯವಿಟ್ಟು ಸೇಫ್​ ಆಗಿರಿ. ಇಷ್ಟೆಲ್ಲದರ ನಂತರ ನನಗೆ ಅನಿಸಿದ್ದು ವಾರ್​ ರೂಮ್​ನಿಂದ ಹಿಡಿದು ಆಯಂಬುಲೆನ್ಸ್​ ಡ್ರೈವರ್​, ಕೊವಿಡ್ ಸೆಂಡರ್​ನ ವಾಲಂಟಿಯರ್ಸ್​, ಆಸ್ಪತ್ರೆಯ ಸಿಬ್ಬಂದಿಗಳು, ವೈದ್ಯರು, ಚಿತಾಗಾರದ ಸಿಬ್ಬಂದಿಗಳೆಲ್ಲರೂ ದಿನದ 16-18 ಘಂಟೆಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ದಯವಿಟ್ಟು ಯಾರನ್ನೂ ನಿಂದಿಸಬೇಡಿ’ ಎಂದು ಜಯತೀರ್ಥ ಹೇಳಿದ್ದಾರೆ.
‘ಈ ವಿಷಮ ಪರಿಸ್ಥಿತಿಯನ್ನು ಎಲ್ಲರೂ ಕೂಡಿ ಹಿಮ್ಮೆಟ್ಟಿಸಬೇಕಿದೆ. ಪ್ರಭಾವಿಗಳು, ರಾಜಕಾರಣಿಗಳು ಸಮರೋತ್ಸಾಹದಲ್ಲಿ ಕೆಲಸ ಮಾಡುತ್ತಿರುವವರಿಗೆ ಕಿರುಕುಳ ಕೊಡುತ್ತಿದ್ದಾರೆ. ಸರ್ಕಾರ ಮುನ್ನೆಚ್ಚರಿಕೆ ವಹಿಸಿದ್ದರೆ ಸಂಭವಿಸುತ್ತಿರುವ ಸಾವುಗಳನ್ನು ತಡೆಯಬಹುದಿತ್ತು. ಆದರೆ ದೂಷಣೆ, ನಿಂದನೆಗೆ ಇದು ಸಮಯವಲ್ಲ. ದಯವಿಟ್ಟು ಜಾಗರೂಕರಾಗಿರಿ’ ಎಂದು ಜಯತೀರ್ಥ ಮನವಿ ಮಾಡಿಕೊಂಡಿದ್ದಾರೆ.

https://www.facebook.com/jayathirthaOfficial/photos/a.2022333244655627/2953920284830247/?type=3

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss