Saturday, July 2, 2022

Latest Posts

ಕೊರೋನಾದಿಂದ ಗುಣಮುಖರಾದವರು ಪ್ಲಾಸ್ಮಾ ದಾನ ಮಾಡಿ ಸೋಂಕಿತರ ಬದುಕಿಗೆ ಆಸರೆಯಾಗಿ: ಶಾಸಕ ಎಲ್.ನಾಗೇಂದ್ರ

ಮೈಸೂರು: ಕೊರೋನಾ ವೈರಾಣು ವಿರುದ್ಧ ಹೋರಾಟ ನಡೆಸಿ ಗುಣಮುಖರಾದವರು, ಮತ್ತೊಬ್ಬ ಸೋಂಕಿತರನ್ನು ಗುಣಮುಖರಾಗಿಸಲು ತಮ್ಮ ರಕ್ತದಾನ ಮಾಡಬೇಕು ಎಂದು ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್.ನಾಗೇಂದ್ರ ತಿಳಿಸಿದರು.
ಭಾನುವಾರ ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೀವಧಾರಾ ರಕ್ತನಿಧಿ ಕೇಂದ್ರದಲ್ಲಿ “ಪ್ಲಾಸ್ಮಾ ಡೋನರ್ಸ್ ಲೈಫ್ ಸೇವರ್ಸ್” ಪ್ಲಾಸ್ಮಾ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊರೋನಾ ಸೋಂಕು ನಿಯಂತ್ರಣವಾಗುತ್ತಿದೆ ಎನ್ನುವುದಕ್ಕೆ ಸೊಂಕಿನಿAದ ಗುಣಮುಖರಾಗಿ ಪ್ಲಾಸ್ಮಾ ರಕ್ತ ದಾನ ಮಾಡುತ್ತಿರುವವರೇ ಸಾಕ್ಷಿಯಾಗಿದ್ದಾರೆ. ಸೊಂಕಿತರು ಗುಣಮುಖರಾಗಲು ರೋಗನಿರೋಧಕ ಶಕ್ತಿ ಅವಶ್ಯಕ. ಅಂತವರಿಗೆ ರಕ್ತದಲ್ಲಿರುವ ಪ್ಲಾಸ್ಮಾವನ್ನು ನೀಡಿದರೆ ಬೇಗ ಗುಣಮುಖರಾಗುತ್ತಾರೆ, ಪ್ಲಾಸ್ಮಾ ಡೋನರ್ಸ್ ಲೈಫ್ ಸೇವರ್ಸ್ ಕರೆಯ ಮೂಲಕ ಈಗಾಗಲೇ ೩೦ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿರುವುದು ಶ್ಲಾಘನೀಯ. ಈಗಾಗಲೇ ರಾಜ್ಯ ಸರ್ಕಾರ ಪ್ಲಾಸ್ಮಾ ರಕ್ತದಾನ ಮಾಡುವವರಿಗೆ ೫೦೦೦ರೂ ಗೌರವಧನ ನೀಡಲಾಗುತ್ತಿದೆ. ರಕ್ತದಾನ ಇನ್ನೊಬ್ಬರಿಗೆ ಜೀವದಾನವಿದ್ದಂತೆ. ಹಾಗಾಗಿ ಹೆಚ್ಚಾಗಿ ಕೊರೋನಾ ಸೋಂಕಿತರು ಗುಣಮುಖರು ಪ್ಲಾಸ್ಮಾ ದಾನ ಮಾಡಲು ಮುಂದಾಗಬೇಕು ಇದರಿಂದ ಮತ್ತೊಬ್ಬರ ಪ್ರಾಣ ಉಳಿಸಬಹುದು ಎಂದರು.
ಇದೇ ವೇಳೆ ಕೋರೋನಾ ಸೋಂಕಿನಿAದ ಗುಣಮುಖರಾಗಿ ಸ್ವಯಂ ಪ್ರೇರಿತವಾಗಿ ಪ್ಲಾಸ್ಮಾದಾನ ಮಾಡಿದ ಶಿವಶಂಕರ್,ರವಿಕುಮಾರ್, ನಿದೇಶ್ , ಶ್ರೇಯಸ್ ,ಅಭಿಲಾಷ್ ,ವಿಕ್ರಂ ಕುಮಾರ್ ಅವರಗಳನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಜೀವಧಾರ ರಕ್ತನಿಧಿ ಮುಖ್ಯಸ್ಥ ಗಿರೀಶ್, ರಕ್ತದಾನ ಮಹಾದಾನ ಗೋಭಕ್ತ ಸಂಘ ಅಧ್ಯಕ್ಷ ದೇವೆಂದ್ರ,ಆನAದ್ , ಕುಮಾರ್ ಕಶ್ಯಪ್ ಮುಂತಾದವರು ಇದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss