spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, October 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊರೋನಾದಿಂದ ಜಾನುವಾರುಗಳಿಗೂ‌ ಸಂಕಷ್ಟ: ಸೊಂಕಿತರ ಮನೆಯಲ್ಲಿರುವ ಸಾಕು ಪ್ರಾಣಿಗಳು ಅನಾಥ

- Advertisement -Nitte

ಚಿಕ್ಕಬಳ್ಳಾಪುರ: ವಿಶ್ವವನ್ನು ವಿಕೃತವಾಗಿ ಕಾಡುತ್ತಿರುವ ಕೊರೋನಾದಿಂದ ಕೇವಲ ಮನುಷ್ಯರಿಗೆ ಮಾತ್ರವಲ್ಲದೆ ಜಾನುವಾರುಗಳಿಗೂ ಸಂಕಷ್ಟ ಎದುರಾಗಿದ್ದು, ಸೊಂಕಿತರ ಮನೆಗಳಲ್ಲಿರುವ‌ ಸಾಕು ಪ್ರಾಣಿಗಳು ಅನಾಥವಾಗುತ್ತಿವೆ.

ರಾಜ್ಯದಲ್ಲೂ ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ಇದೀಗ ಮಹಮ್ಮಾರಿ ಗ್ರಾಮೀಣ ಜನರ ಬದುಕಲ್ಲಿ ಕೊಲಾಹಲ ಸೃಷ್ಟಿಸುತ್ತಿದೆ ಎಂದರೆ ತಪ್ಪಾಗಲಾರದು. ಮನುಷ್ಯನ ಬದುಕಿನ ಭಾಗವಾಗಿರುವ ಹಸು, ಎಮ್ಮೆ, ಎತ್ತು, ಕುರಿ, ಮೇಕೆಯಂತಹ ಜಾನುವಾರುಗಳಲ್ಲದೇ, ನಾಯಿ, ಬೆಕ್ಕು ಅಂತಹ ಸಾಕು ಪ್ರಾಣಿಗಳಿಗೂ ಕೊರೋನಾ ಕಾಟ ತಪ್ಪುತ್ತಿಲ್ಲ.

ಕೊರೋನಾದಿಂದ ಗ್ರಾಮೀಣ ಜನರು ಆಸ್ಪತ್ರೆಗಳ ಪಾಲಾಗುತ್ತಿದ್ದರೆ ಮನುಷ್ಯರನ್ನೇ ನಂಬಿ ಬದುಕುತ್ತಿರುವ ಮೂಖ ಪ್ರಾಣಿಗಳು ಅನಾಥವಾಗುತ್ತಿವೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಸೊಮೇನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಘಟನೆ ಇದಕ್ಕೆ ಉತ್ತಮ ನಿದರ್ಶನವಾಗಿದೆ. ಗ್ರಾಮದ ವ್ಯಕ್ತಿಯೋರ್ವನಿಗೆ ಕೆಲದಿನಗಳ ಹಿಂದೆ ಕೊರೋನಾ ದೃಡಪಟ್ಟಿತ್ತು. ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಂತರ ಎರಡು, ಮೂರು ದಿನಗಳಲ್ಲಿಯೇ ಮನೆಯಲ್ಲಿದ್ದ ಮತ್ತಿಬ್ಬರಿಗೂ ಸೊಂಕು ತಾಕಿದ್ದರಿಂದ ಮನೆಮಂದಿ ಎಲ್ಲರನ್ನೂ ಆಸ್ಪತ್ರೆ ಸೇರಿಸಲಾಯಿತು.

ಅವರ ಮನೆಯಲ್ಲಿದ್ದ ಎರಡು ಸೀಮೆ ಹಸುಗಳು ಮೇವು, ನೀರಿಲ್ಲದೆ, ಹಾಲು ಕರೆಯುವವರಿಲ್ಲದೇ ಹಲವು ದಿನಗಳ ಕಾಲ ನರಳಾಡಿವೆ.

ಮನೆಮಂದಿಗೆಲ್ಲಾ ಕೊರೋನಾ ದೃಡಪಟ್ಟಿದ್ದರಿಂದ ಅಧಿಕಾರಿಗಳು‌ ಮನೆಯನ್ನು ಸೀಲ್ ಡೌನ್ ಮಾಡಿದ್ದಾರೆ. ಇದರಿಂದ ಭಯಕ್ಕೆ ಗ್ರಾಮಸ್ಥರು ಯಾರೊಬ್ಬರೂ ಈ ಮೂಖ ಪ್ರಾಣಿಗಳ ಬಗ್ಗೆ ತಲೆಕೆಡಿಕೊಂಡಿಲ್ಲ. ಮೂರ್ನಾಲ್ಕು ದಿನಗಳ ನಂತರ ಜಾನುವಾರುಗಳ ಪರಿಸ್ಥಿತಿ ನೋಡಲಾದೆ ಗ್ರಾಮದ ಯುವಕನೋರ್ವ ದೈರ್ಯಮಾಡಿ ಹಸುಗಳಿಗೆ ಮೇವು, ನೀರು ನೀಡಿದ್ದಾನೆ.

ಈ ಹಸುಗಳಿಗೂ ಕೊರೋನಾ ತಾಕಿರುವ ಭೀತಿ ಗ್ರಾಮಸ್ಥರಲ್ಲಿ ಆವರಿಸಿದ್ದು, ಹಸುಗಳಿಂದ ಪಡೆದ ಹಾಲನ್ನು ಡೈರಿಗೆ ಹಾಕಬಾರದೆಂದ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ.

ಕೊರೊನಾ ಬಂದಿರುವ ವ್ಯಕ್ತಿಯ ಮನೆಯವರನ್ನು ಕ್ವಾರಂಟೈನ್ ಮಾಡುತ್ತಿದ್ದಾರೆ ಹೊರಗಡೆ ಓಡಾಡಬಾರದು ಎಂದು ಹೇಳುತ್ತಾರೆ. ನಾವು ಸರ್ಕಾರ ಹೇಳಿದ ಹಾಗೆ ಕ್ವಾರಂಟೈನ್ ಅಲ್ಲಿ ಇರುತ್ತೇವೆ ಆದರೆ ನಮ್ಮನ್ನು ನಂಬಿಕೊಂಡಿರುವ ನಮ್ಮ ಜಾನುವಾರುಗಳ ಗತಿಯೇನು? ನಮಗೂ ಕೊರೊನಾ ಪಾಸಿಟಿವ್ ಆದಾಗ ನಾವು ಆಸ್ಪತ್ರೆಗೆ ಹೋದ್ರೆ ನಮ್ಮ ಹಸು, ಎಮ್ಮೆ, ಕುರಿ, ಮೇಕೆಗಳನ್ನು ನೋಡಿಕೊಳ್ಳುವವರು ಯಾರು? ಎಂಬುದು ಗ್ರಾಮೀಣ ಜನರ ಪ್ರಶ್ನೆಯಾಗಿದೆ.

ಒಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಕೊರೋನಾದಿಂದ ಜನರು ಮಾತ್ರವಲ್ಲದೆ ಜಾನುವಾರುಗಳು ಹಾಗೂ ಸಾಕು ಪ್ರಾಣಿಗಳು ಸಾಹಾ ಸಂಕಷ್ಟಕ್ಕೆ ಸಿಳುಕಿದಂತಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss