Tuesday, September 22, 2020
Tuesday, September 22, 2020

Latest Posts

ಮಹಾಮಳೆಗೆ ಉಡುಪಿ ಜಿಲ್ಲೆಯಲ್ಲಿ 290 ಕೋಟಿ ರೂ.ನಷ್ಟ: ಈಗ ಸಿಕ್ಕಿರುವುದು ಪ್ರಾಥಮಿಕ ವರದಿಯಷ್ಟೆ

ಉಡುಪಿ: ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಸುರಿದ ಮಹಾಮಳೆಗೆ ಭಾರೀ ಹಾನಿ ಸಂಭವಿಸಿದ್ದು, ಬರೋಬ್ಬರಿ 290 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ...

ಕೇಂದ್ರ ಸಚಿವೆ ಇರಾನಿ ಗಮನಸೆಳೆದ ‘ಮಟ್ಟು’ ಗ್ರಾಮದಲ್ಲಿನ ಇತರ ಸಂತ್ರಸ್ತರಿಗೂ ಬೇಕಿದೆ ಶೀಘ್ರ ಸ್ಪಂದನೆ!

ಉಡುಪಿ: ಜಿಲ್ಲೆಯ ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ಗ್ರಾಮದಲ್ಲಿ ನೇಕಾರಿಕೆ ಮಾಡುತ್ತಿದ್ದ ಲಕ್ಷ್ಮಣ ಶೆಟ್ಟಿಗಾರ್ ಅವರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹಾಯ ಮಾಡಿದ್ದು, ನೆರೆ ನೀರು ತುಂಬಿದ 24 ತಾಸುಗಳಲ್ಲಿ...

ಸರಕಾರದ ಯೋಜನೆ ಅರ್ಹ ಸಫಾಯಿ ಕರ್ಮಚಾರಿಗಳಿಗೆ ಸಿಗಲಿ: ಜಿಲ್ಲಾಧಿಕಾರಿ ಜಗದೀಶ್

ಮಣಿಪಾಲ: ಸಫಾಯಿ ಕರ್ಮಚಾರಿಗಳ ಕಲ್ಯಾಣ ಅಭಿವೃದ್ಧಿಗೆ ಸರಕಾರ ರೂಪಿಸಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಆಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ...

ಕೊರೋನಾದಿಂದ ನೆಲ ಕಚ್ಚಿದ ಉದ್ಯಮ: ಕೃಷಿಯತ್ತ ಮುಖ ಮಾಡಿದ ಯುವಕರು!

sharing is caring...!

ಎಂ.ಜೆ.ತಿಪ್ಪೇಸ್ವಾಮಿ

ಚಿತ್ರದುರ್ಗ: ಕೋವಿಡ್ – ೧೯ ಲಾಕ್‌ಡೌನ್ ಜಾರಿಯಾದ ಸಂದರ್ಭದಲ್ಲಿ ಅನೇಕ ಉದ್ಯಮಗಳು ನೆಲ ಕಚ್ಚಿದವು. ಅನೇಕ ವ್ಯವಹಾರಗಳಲ್ಲಿ ನಷ್ಟ ಉಂಟಾಯಿತು. ಅದರಂತೆ ಹಿರಿಯೂರು ತಾಲ್ಲೂಕಿನ ಕೃಷ್ಣಮೂರ್ತಿ ಹಾಗೂ ಕುಮಾರ್ ಎಂಬ ಯುವಕರು ಸಹ ಶಾಮಿಯಾನದ ಅಂಗಡಿ ಹಾಗೂ ಕ್ಯಾಬ್ ವ್ಯವಹಾರ ನಡೆಸಿ ಕೈಸುಟ್ಟುಕೊಂಡರು. ವ್ಯಾಪಾರ ಇಲ್ಲದೇ ನಷ್ಟ ಅನುಭವಿಸಿದ ಇವರು ನಂತರ ಕೃಷಿಯತ್ತ ಮುಖ ಮಾಡಿ ಉತ್ತಮ ಬೆಳೆ ಬೆಳೆಯಲು ಮುಂದಾಗಿದ್ದಾರೆ.
ಚಿತ್ರದುರ್ಗ ನಗರದ ಐಯುಡಿಪಿ ಲೇಔಟ್‌ನಲ್ಲಿ ಕಳೆದ ಎಂಟ್ಹತ್ತು ವರ್ಷಗಳಿಂದ ಶಾಮಿಯಾನ ವ್ಯವಹಾರದಲ್ಲಿ ತೊಡಗಿದ್ದ ಕೃಷ್ಣಮೂರ್ತಿ ಹಾಗೂ ಬೆಂಗಳೂರಿನಲ್ಲಿ ಕಳೆದ ೧೩ ವರ್ಷಗಳಿಂದ ಕ್ಯಾಬ್ ಬಾಡಿಗೆ ನಡೆಸುತ್ತಿದ್ದ ಕುಮಾರ್ ಕೊರೋನಾ ಲಾಕ್‌ಡೌನ್ ಕಾರಣಕ್ಕೆ ತಮ್ಮ ವ್ಯವಹಾರ ಕುಂಠಿತವಾಗಿ ನಷ್ಟ ಅನುಭವಿಸಿದರು. ಇದರಿಂದ ಕಂಗಾಲಾದ ಯುಕವರು ತಾವು ಹುಟ್ಟಿದ ಊರುಗಳಿಗೆ ಹಿಂತಿರುಗಿ ಬದುಕು ಕಟ್ಟಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಕೃಷ್ಣಮೂರ್ತಿ ಹಾಗೂ ಕುಮಾರ್ ಇಬ್ಬರೂ ಹಿರಿಯೂರು ತಾಲೂಕಿನ ಸೂರಗೊಂಡನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಆಲಮರದಹಟ್ಟಿ ಗ್ರಾಮದವರು. ತಮಗೆ ಸ್ವಂತ ಜಮೀನು ಇದ್ದರೂ ಕೃಷಿ ಮಾಡದೆ ನಗರದ ತಳುಕುಬಳುಕಿನ ಜೀವನಕ್ಕೆ ಮಾರು ಹೋಗಿದ್ದರು. ನಗರ ಪ್ರದೇಶದಲ್ಲಿ ಶಾಮಿಯಾನ ಹಾಗೂ ಕ್ಯಾಬ್ ಬಾಡಿಗೆ ವ್ಯವಹಾರ ನಡೆಸುತ್ತಿದ್ದರು. ಕೋವಿಡ್ – ೧೯ ಹಿನ್ನೆಲೆ ತಮ್ಮ ವ್ಯವಹಾರಗಳಲ್ಲಿ ನಷ್ಟ ಅನುಭವಿಸಿದ ಪರಿಣಾಮ ತಮ್ಮ ಗ್ರಾಮಗಳಿಗೆ ವಾಪಾಸ್ಸಾಗಿ ತಮ್ಮ ಜಮೀನಿನಲ್ಲಿ ಸಮಗ್ರ ಕೃಷಿ ಮಾಡಿ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಶಾಮಿಯಾನ ವ್ಯವಹಾರ ಮಾಡಿಕೊಂಡಿದ್ದ ಕೃಷ್ಣಮೂರ್ತಿ ಗ್ರಾಮದ ಗುಡ್ಡದ ತಪ್ಪಲಿನಲ್ಲಿರುವ ತಮ್ಮ ಎಂಟು ಎಕರೆ ಭೂಮಿಯನ್ನು ಹಸನು ಮಾಡಿ, ಅದರಲ್ಲಿ ಹತ್ತಿ, ಶೇಂಗಾ, ಈರುಳ್ಳಿ, ಕ್ಯಾರೇಟ್, ಟೊಮೊಟೊ, ಮೆಣಸಿನಕಾಯಿ, ಹೀರೇಕಾಯಿ, ಹಾಗಲಕಾಯಿ, ಬೆಂಡೆಕಾಯಿ ಸೇರಿದಂತೆ ಸಮಗ್ರ ಕೃಷಿ ಮಾಡುತ್ತಿದ್ದಾರೆ. ತಮ್ಮ ಜಮೀನಿನಲ್ಲೇ ಗುಡಿಸಲು ಕಟ್ಟಿಕೊಂಡಿರುವ ಇವರು ತಮ್ಮ ಒಡಹುಟ್ಟಿದವರ ಜೊತೆ ಸೇರಿ ಕೂಡು ಕುಟುಂಬದಲ್ಲಿ ಸಹ ಜೀವನ ನಡೆಸುತ್ತಿದ್ದಾರೆ.
ಸುಮಾರು ಎಂಟ್ಹತ್ತು ವರ್ಷಗಳಿಂದ ಚಿತ್ರದುರ್ಗ ನಗರದಲ್ಲಿ ಶಾಮಿಯಾನ ಅಂಗಡಿ ಮಾಡಿ ಬಾಡಿಗೆ ನೀಡುತ್ತಿದ್ದೆವು. ಆದರೆ ಕೊರೋನಾ ವೈರಸ್ ಆವರಿಸಿದ ಕಾರಣ ವ್ಯಾಪಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿದೆ. ಇದರಿಂದ ಬೇಸತ್ತು ಊರಿಗೆ ವಾಪಾಸ್ಸಾಗಿ ಜಮೀನಿನಲ್ಲೇ ಗುಡಿಸಲು ಕಟ್ಟಿಕೊಂಡು ಎಂಟು ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಮಾಡುತ್ತಿದ್ದೇನೆ. ಈ ವರ್ಷ ಉತ್ತಮ ಮಳೆಯಾಗಿ ಬೆಳೆ ಚೆನ್ನಾಗಿ ಬಂದಿದೆ. ಹಾಗಾಗಿ ಉತ್ತಮ ಇಳುವರಿ ಬರುವ ನಿರೀಕ್ಷೆಯಿದೆ ಎನ್ನುತ್ತಾರೆ ಕೃಷ್ಣಮೂರ್ತಿ.
ಬೆಂಗಳೂರಿನಲ್ಲಿ ಸುಮಾರು ವರ್ಷಗಳಿಂದ ಮೂರು ಕಾರುಗಳನ್ನು ಇಟ್ಟುಕೊಂಡು ಕಂಪನಿಗಳಿಗೆ ಬಾಡಿಗೆ ಓಡಿಸುತ್ತಿದ್ದೆ. ಆದರೆ ಕೊರೋನಾ ಕಾರಣ ಊರಿಗೆ ಬರಬೇಕಾಯಿತು. ಇಲ್ಲಿ ಹೊಲ ಬೀಳು ಬಿದ್ದಿದ್ದನ್ನು ನೋಡಿ ಬೇಸರವಾಯಿತು. ಅದನ್ನು ಹಸನು ಮಾಡಿ ಹತ್ತಿ, ಶೇಂಗಾ, ಮೆಕ್ಕೆಜೋಳ, ಈರುಳ್ಳಿ, ಕೊತ್ತಂಬರಿ ಬೀಜ ಸೇರಿದಂತೆ ತರಕಾರಿ ಹಾಗೂ ಮತ್ತಿತರ ಬೆಳೆ ಹಾಕಿದ್ದೇನೆ. ಎಲ್ಲ ಬೆಳೆ ಚೆನ್ನಾಗಿದ್ದು, ಉತ್ತಮ ಇಳುವರಿ ಬರುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಕೃಷಿಯ ಜೊತೆಗೆ ಹೈನುಗಾರಿಕೆಯನ್ನೂ ಮಾಡುತ್ತೇನೆ ಎಂಬ ಉತ್ಸಾಹದ ನುಡಿ ಕುಮಾರ್ ಅವರದ್ದು.
ಒಟ್ಟಿನಲ್ಲಿ ಸ್ವಂತ ಜಮೀನಿದ್ದರೂ ವ್ಯವಸಾಯ ಮಾಡದೆ ಪೇಟೆ ಸೇರಿದ್ದ ಯುಕವರಿಗೆ ಕೊರೋನಾ ಕೃಷಿಯನ್ನು ಅಪ್ಪಿಕೊಳ್ಳುವಂತೆ ಮಾಡಿದೆ. ಬಣ್ಣದ ಜಗತ್ತಿನ ಮೋಹದಿಂದ ನಗರ ಸೇರಿದ್ದ ಯುವಕರಿಗೆ ಅಲ್ಲಿನ ಪರಿಸ್ಥಿತಿಯಿಂದ ಉತ್ತಮ ಪಾಠ ಕಲಿತ ಇವರು ತಮ್ಮ ಹುಟ್ಟೂರಿನ ಮಣ್ಣಿನಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾಗಿರುವುದು ಇತರರಿಗೂ ಮಾದರಿಯಾಗಲಿ ಎಂದು ಆಶಿಸೋಣ.

Latest Posts

ಮಹಾಮಳೆಗೆ ಉಡುಪಿ ಜಿಲ್ಲೆಯಲ್ಲಿ 290 ಕೋಟಿ ರೂ.ನಷ್ಟ: ಈಗ ಸಿಕ್ಕಿರುವುದು ಪ್ರಾಥಮಿಕ ವರದಿಯಷ್ಟೆ

ಉಡುಪಿ: ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಸುರಿದ ಮಹಾಮಳೆಗೆ ಭಾರೀ ಹಾನಿ ಸಂಭವಿಸಿದ್ದು, ಬರೋಬ್ಬರಿ 290 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ...

ಕೇಂದ್ರ ಸಚಿವೆ ಇರಾನಿ ಗಮನಸೆಳೆದ ‘ಮಟ್ಟು’ ಗ್ರಾಮದಲ್ಲಿನ ಇತರ ಸಂತ್ರಸ್ತರಿಗೂ ಬೇಕಿದೆ ಶೀಘ್ರ ಸ್ಪಂದನೆ!

ಉಡುಪಿ: ಜಿಲ್ಲೆಯ ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ಗ್ರಾಮದಲ್ಲಿ ನೇಕಾರಿಕೆ ಮಾಡುತ್ತಿದ್ದ ಲಕ್ಷ್ಮಣ ಶೆಟ್ಟಿಗಾರ್ ಅವರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹಾಯ ಮಾಡಿದ್ದು, ನೆರೆ ನೀರು ತುಂಬಿದ 24 ತಾಸುಗಳಲ್ಲಿ...

ಸರಕಾರದ ಯೋಜನೆ ಅರ್ಹ ಸಫಾಯಿ ಕರ್ಮಚಾರಿಗಳಿಗೆ ಸಿಗಲಿ: ಜಿಲ್ಲಾಧಿಕಾರಿ ಜಗದೀಶ್

ಮಣಿಪಾಲ: ಸಫಾಯಿ ಕರ್ಮಚಾರಿಗಳ ಕಲ್ಯಾಣ ಅಭಿವೃದ್ಧಿಗೆ ಸರಕಾರ ರೂಪಿಸಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಆಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ...

ಸಹಜ ಸ್ಥಿತಿಗೆ ಮರಳಿದ ಉಡುಪಿ ಜಿಲ್ಲೆ: ಮೋಡ-ಬಿಸಿಲ ಜುಗಲ್ ಬಂದಿ!

ಉಡುಪಿ: ಎರಡು ದಿನಗಳ ಕಾಲ ರೆಡ್ ಅಲರ್ಟ್ ಇದ್ದ ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ. ಬೆಳಗ್ಗೆ ಮತ್ತು ಸಂಜೆಯ ವೇಳೆ ರಭಸದಿಂದ ಕೂಡಿದ ಮಳೆಯಾಗಿದ್ದರೂ ದಿನ ಉಳಿದ ಸಮಯ...

Don't Miss

ಮಹಾಮಳೆಗೆ ಉಡುಪಿ ಜಿಲ್ಲೆಯಲ್ಲಿ 290 ಕೋಟಿ ರೂ.ನಷ್ಟ: ಈಗ ಸಿಕ್ಕಿರುವುದು ಪ್ರಾಥಮಿಕ ವರದಿಯಷ್ಟೆ

ಉಡುಪಿ: ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಸುರಿದ ಮಹಾಮಳೆಗೆ ಭಾರೀ ಹಾನಿ ಸಂಭವಿಸಿದ್ದು, ಬರೋಬ್ಬರಿ 290 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ...

ಕೇಂದ್ರ ಸಚಿವೆ ಇರಾನಿ ಗಮನಸೆಳೆದ ‘ಮಟ್ಟು’ ಗ್ರಾಮದಲ್ಲಿನ ಇತರ ಸಂತ್ರಸ್ತರಿಗೂ ಬೇಕಿದೆ ಶೀಘ್ರ ಸ್ಪಂದನೆ!

ಉಡುಪಿ: ಜಿಲ್ಲೆಯ ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ಗ್ರಾಮದಲ್ಲಿ ನೇಕಾರಿಕೆ ಮಾಡುತ್ತಿದ್ದ ಲಕ್ಷ್ಮಣ ಶೆಟ್ಟಿಗಾರ್ ಅವರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹಾಯ ಮಾಡಿದ್ದು, ನೆರೆ ನೀರು ತುಂಬಿದ 24 ತಾಸುಗಳಲ್ಲಿ...

ಸರಕಾರದ ಯೋಜನೆ ಅರ್ಹ ಸಫಾಯಿ ಕರ್ಮಚಾರಿಗಳಿಗೆ ಸಿಗಲಿ: ಜಿಲ್ಲಾಧಿಕಾರಿ ಜಗದೀಶ್

ಮಣಿಪಾಲ: ಸಫಾಯಿ ಕರ್ಮಚಾರಿಗಳ ಕಲ್ಯಾಣ ಅಭಿವೃದ್ಧಿಗೆ ಸರಕಾರ ರೂಪಿಸಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಆಗಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ...
error: Content is protected !!