ಕ್ಯಾಲಿಫೋರ್ನಿಯಾ: ಫೆಸಿಫಿಕ್ ಮಹಾಸಾಗರದ ಸಾಂತಾ ಮೋನಿಕಾ ಬೀಚ್ ದಂಡೆಯ ಮೇಲೆ ಈ ಕಲಾವಿದ ನುಡಿಸುವ ಬ್ಯಾಗ್ ಪೈಪರ್ ಕೇಳಿದ ಅನೇಕ ಮಂದಿ ಸಂಗೀತ ಕೇಳುವುದನ್ನೇ ಬಿಟ್ಟಿದ್ದಾರೆ. ಸೂರ್ಯಾಸ್ತ ಮಾನದ ಸಮಯದಲ್ಲಿ ಸಾಗರದ ಅಲೆಗಳು ಅಲೆ ಅಲೆಯಾಗಿ ಅಪ್ಪಳಿಸುತ್ತಿದ್ದರೆ ಆ್ಯಂಡ್ರೂ ಎಂಸಿಗ್ರೆಗರ್ ವಿಶಿಷ್ಟ ಉಡುಪಿನಲ್ಲಿ ಬ್ಯಾಗ್ ಪೈಪರ್ ಮೂಲಕ ವಿಶೇಷ ವಾದ್ಯವನ್ನು ನುಡಿಸುತ್ತಿದ್ದಾರೆ.
ಸಂಜೆ ವಾಯುವಿಹಾರಕ್ಕೆ ಹೊರಟಿರುವ ಕ್ಯಾಲಿಪೋರ್ನಿಯಾದ ಅನೇಕ ಪ್ರಜೆಗಳು ಈ ಕಲಾವಿದನ ಸಂಗೀತಕ್ಕೆ ತಲೆ ದೂಗಿದ್ದಾರೆ. ಸಂಗೀತ ಕಿವಿಗಪ್ಪಳಿಸುತ್ತಿದ್ದಂತೆ ಕೊರೋನಾ ದಲ್ಲಿ ಸಾವನಪ್ಪಿರುವವರ ಬಗ್ಗೆ ದುಃಖ ಉಂಟಾಗುತ್ತದೆ. ಇತ್ತೀಚೆಗೆ ಬ್ಯಾಗ್ ಪೈಪರ್ ನುಡಿಸುವುದನ್ನು ಕೇಳಿದ ಬಳಿಕ ನಾನು ಬೇರೆ ಸಂಗೀತಗಳನ್ನು ಹೇಳುವುದನ್ನು ಬಿಟ್ಟಿದ್ದೇನೆ ಎನ್ನುತ್ತಾರೆ ವಾಯು ವಿಹಾರಿ ಲಿಸಾ ಲಿಪ್ಮನ್.
ನನ್ನ ಪ್ರದರ್ಶನ ಕೊರೋನಾ ದಲ್ಲಿ ಮಡಿದವರಿಗೆ ಯಾವ ರೀತಿ ಸಹಾಯವಾಗುತ್ತದೆ ಎಂಬುದು ಗೊತ್ತಿಲ್ಲ. ನಾನು ಅವರಿಗೆ ಗೌರವ ಸೂಚಿಸುವ ಸಲುವಾಗಿ ಸೂರ್ಯಾಸ್ತದ ವೇಳೆಗೆ ಇದನ್ನು ನುಡಿಸುತ್ತೇನೆ ಎನ್ನುತ್ತಾರೆ ಸ್ಕಾಟಿಷ್ ಸಂಗೀತ ಮನೆತನದ ಆ್ಯಂಡ್ರ್ಯೂ.