ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪಕವಾಗುತ್ತಿದಂತೆಯೇ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. ಕೊರೋನಾ ವೈರಸ್ ಸೋಂಕು ತಡೆಯಲು ಸರ್ಕಾರ ಮಾ.31ರವರೆಗೂ ರಾಜ್ಯದ್ಯಂತ ಲಾಕ್ ಡೌನ್ ಮಾಡಿದ್ದು, ನಷ್ಟದಲ್ಲಿ ಸಿಲುಕಿರುವ ಬಡವರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೋವಿಡ್-19 ನ ವಿಶೇಷ ಪ್ಯಾಕೇಜ್ ನೆರವು ನೀಡುವುದಾಗಿ ಘೋಷಿಸದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಡವರ ಬಂಧು ಯೋಜನೆಯ ಸಾಲಮನ್ನಾ, ರೇಷನ್ ಕಾರ್ಡ್ ಹೊಂದಿರುವವರಿಗೆ ಎರಡು ತಿಂಗಳ ಪಡಿತರ ಮುಂಗಡವಾಗಿ ನೀಡಲಾಗುದು, ಸಾಮಾಜಿಕ ಭದ್ರತಾ ಪಿಂಚಣಿ ಹಣವನ್ನು ಮುಂಗಡವಾಗಿ ನೀಡಲು ಸೂಚನೆ ನೀಡಲಾಗಿದೆ ಎಂದರು.
ರಾಜ್ಯದಲ್ಲಿನ 21 ಲಕ್ಷ ಕಟ್ಟಡ ಕಾರ್ಮಿಕರಿಗೆ ತಿಂಗಳಿಗೆ ತಲಾ ಒಂದು ಸಾವಿರ ಪರಿಹಾರ ಧನ ನೀಡಲಾಗುವುದು ಎಂದು ಸಿಎಂ ಬಿ.ಎಸ್.ವೈ ಘೋಷಿಸಿದರು.