ನವದೆಹಲಿ: ಪಶ್ಚಿಮ ಬಂಗಾಳ ರಾಜ್ಯದಲ್ಲಿ ಜೂನ್ ೩೦ ರಿಂದ ಜುಲೈ೩೧ ರವರೆಗೆ ಲಾಕ್ಡೌನ್ ಅನ್ನು ವಿಸ್ತರಿಸದ್ದಾರೆ.
ಇಂದು ೩ ಗಂಟೆಗಳ ಎಲ್ಲಾ ಪಕ್ಷದ ಸಭೆಯ ಕೊನೆಯಲ್ಲಿ ಇದನ್ನು ಘೋಷಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೊರೋನಾ ವ್ಯಾಪಾಕವಾಗಿ ಹರಡುತ್ತಿದೆ. ಲಾಕ್ಡೌನ್ ಅನ್ನು ನಿರ್ಬಂಧಗಳೊಂದಿಗೆ ಜುಲೈ ೩೧ ರವರೆಗೆ ವಿಸ್ತರಿಸಲು ಪ್ರಯತ್ನಿಸೋಣ ಎಂದು ತಿಳಿಸಿದ್ದಾರೆ.
ಬಂಗಾಳದಲ್ಲಿ ಇಂದು ೪೪೫ ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಒಟ್ಟು ೧೫,೧೭೩ ಕ್ಕೆ ತಲುಪಿದೆ. ಈ ಪೈಕಿ ಸಕ್ರಿಯ ಪ್ರಕರಣಗಳ ಸಂಖ್ಯೆ ೪,೮೯೦. ಅಲ್ಲದೆ, ೧೧ ಸಾವುಗಳು ದಾಖಲಾಗಿದ್ದು, ಒಟ್ಟು ೫೯೧ ಕ್ಕೆ ತಲುಪಿದೆ.