Wednesday, June 29, 2022

Latest Posts

ಕೊರೋನಾ ಅಟ್ಟಹಾಸ: ಹಾಸನ ಜಿಲ್ಲೆಯಲ್ಲಿ ನಾಲ್ಕನೇ ಬಲಿ

ಹಾಸನ: ಜಿಲ್ಲೆಯಲ್ಲಿ ಕೋವಿಡ್ ಗೆ ನಾಲ್ಕನೇ ಬಲಿಯಾಗಿದ್ದು ತೀವ್ರ ಆತಂಕ ಮೂಡಿಸಿದೆ.
ಜೂ.27ರಂದು ತೀವ್ರ ಜ್ವರದಿಂದ ಬಳಲುತ್ತಿದ್ದ ಹಾಸನ ತಾಲೂಕಿನ ದುದ್ದ ಮೂಲದ 32ವಷ೯ದ ಯುವಕನನ್ನು ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಜೂ.28ರಂದು ಯುವಕನಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು,ಬುಧವಾರ ಬೆಳಗ್ಗೆ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇದುವರೆಗೂ ಜಿಲ್ಲೆಯಲ್ಲಿ ಕೇವಲ 20 ದಿನದ ಅಂತರದಲ್ಲಿ ನಾಲ್ವರು ಕೋವಿಡ್ ನಿಂದ ಮೃತಪಟ್ಟಿದ್ದು,ಒಂದರ ಹಿಂದೊಂದು ಸಾವು ಜನರನ್ನು ಆತಂಕಕ್ಕೆ ದೂಡಿದೆ. ಕೋವಿಡ್ ಗೆ ಬಲಿಯಾದ ಯುವಕನ ಅಂತ ಸಂಸ್ಕಾರವನ್ನು ಸಕಾ೯ರದ ಮಾಗ೯ ಸೂಚಿಯಂತೆ ನಿವ೯ಹಿಸಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss