ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೋವಿಡ್-19ಕ್ಕೆ ಸಂಬಂಸಿದ ಆರ್ಟಿ-ಪಿಸಿಆರ್ ಪರೀಕ್ಷೆ ಮತ್ತು ಚಿಕಿತ್ಸೆಗೆ ದೇಶಾದ್ಯಂತ ದರವೊಂದನ್ನು ನಿಗದಿಪಡಿಸಲು ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಮಂಗಳವಾರ ಕೇಂದ್ರದ ಪ್ರತಿಕ್ರಿಯೆ ಕೇಳಿತು.
ಮುಖ್ಯ ನ್ಯಾಯಾಶ ಎಸ್.ಎ.ಬೊಬ್ಡೆ , ನ್ಯಾ.ಎ.ಎಸ್.ಬೋಪಣ್ಣ, ವಿ.ರಾಮಸುಬ್ರಹ್ಮಣ್ಯನ್ ಅವರನ್ನೊಳಗೊಂಡ ಪೀಠವೊಂದು ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ನೋಟಿಸ್ ನೀಡಿದೆ.ವಕೀಲ ಅಜಯ್ ಅಗರ್ವಾಲ್ ಎಂಬವರು ಈ ಬಗ್ಗೆ ಅರ್ಜಿ ಸಲ್ಲಿಸಿದ್ದು, ಎರಡು ವಾರಗಳ ಬಳಿಕ ನ್ಯಾಯಾಲಯ ಇದನ್ನು ವೀಡಿಯೋ ಕಾನರೆನ್ಸ್ ಮೂಲಕ ವಿಚಾರಣೆಗೆತ್ತಿಕೊಂಡಿದೆ.ಈ ಸಂದರ್ಭದಲ್ಲೇ ಕೋವಿಡ್-19ರ ಚಿಕಿತ್ಸಾ ವೆಚ್ಚ ನಿಗದಿಪಡಿಸುವಂತೆ ಕೋರುವ ಇನ್ನೊಂದು ಅರ್ಜಿಯನ್ನೂ ಇದರೊಂದಿಗೇ ವಿಚಾರಣೆಗೆತ್ತಿಕೊಳ್ಳುವುದಾಗಿ ನ್ಯಾಯಾಲಯ ಹೇಳಿತು.
ಆರ್ಟಿ-ಪಿಸಿಆರ್ ಪರೀಕ್ಷೆಗೆ ದೇಶಾದ್ಯಂತ ಏಕರೂಪದ 400ರೂ.ಗಳ ಗರಿಷ್ಠ ದರ ನಿಗದಿಪಡಿಸಬೇಕು.ಈಗ ವಿಭಿನ್ನ ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶ ಹಾಗೂ ದಿಲ್ಲಿ ಎನ್ಸಿಟಿ ಸರಕಾರಗಳು ಈ ಪರೀಕ್ಷೆಗೆ 900ರೂ.ಗಳಿಂದ 2800ರೂ.ಗಳವರೆಗೆ ದರ ನಿಗದಿಪಡಿಸಿವೆ.
ಆಂಧ್ರದಲ್ಲಿ ಇದರಿಂದ ಪ್ರಯೋಗಾಲಯಗಳು ಗಳಿಸುವ ಲಾಭ ಶೇ.1400ರಷ್ಟು ಇದ್ದರೆ, ದಿಲ್ಲಿಯಲ್ಲಿ ಶೇ.1200ರಷ್ಟಿದೆ .ವಾಸ್ತವವಾಗಿ ಭಾರತೀಯ ಮಾರುಕಟ್ಟೆಯಲ್ಲಿ ಆರ್ಟಿ-ಪಿಸಿಆರ್ ಕಿಟ್ಗಳು ಈಗ 200ರೂ.ಗಳಿಗೂ ಕಡಿಮೆ ದರದಲ್ಲಿ ಲಭಿಸುತ್ತಿವೆ.ಆದ್ದರಿಂದ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳು ನಡೆಸುತ್ತಿರುವ ದೊಡ್ಡ ಲೂಟಿ ಇದಾಗಿದೆ ಎಂಬುದಾಗಿ ಅವರು ಪ್ರತಿಪಾದಿಸಿದ್ದಾರೆ.